ರಾಜ್ಯದ ನಂ.1 ಕೃಷಿ ವಿವಿಯಾಗಿ ಹೊರ ಹೊಮ್ಮಿದ ಧಾರವಾಡ ವಿವಿ

Update: 2019-08-04 15:14 GMT

ಬೆಂಗಳೂರು, ಆ.4: ಧಾರವಾಡದಲ್ಲಿರುವ ಕೃಷಿ ವಿಶ್ವವಿದ್ಯಾಲಯವು ರಾಜ್ಯದ ನಂ.1 ಕೃಷಿ ವಿಶ್ವವಿದ್ಯಾಲಯವಾಗಿ ಹೊರ ಹೊಮ್ಮಿದೆ. ದೇಶದ 75 ಕೃಷಿ ವಿವಿಗಳ ಪಟ್ಟಿಯಲ್ಲಿ ರಾಜ್ಯದ ಧಾರವಾಡ ಕೃಷಿ ವಿವಿ 16 ನೆ ಸ್ಥಾನ ಪಡೆದುಕೊಂಡಿದೆ.

ಹೊಸದಿಲ್ಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಇತ್ತೀಚಿಗೆ ನೀಡಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ, ದೇಶದ ಎಲ್ಲ ಕೃಷಿ ವಿವಿಗಳ ಪ್ರಗತಿಯ ಕುರಿತು ಅಧ್ಯಯನ ಮಾಡಿ ಶ್ರೇಯಾಂಕ ನೀಡಲಾಗಿದೆ. ಕಳೆದ ವರ್ಷ ದೇಶದಲ್ಲಿ 17 ನೆ ಸ್ಥಾನದಲ್ಲಿದ್ದ ಧಾರವಾಡ ವಿವಿ, ಪ್ರಸಕ್ತ ವರ್ಷ 16 ನೆ ಸ್ಥಾನಕ್ಕೇರಿದೆ. ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದ್ದ ವಿವಿ ಇದೀಗ ಪ್ರಥಮ ಸ್ಥಾನಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News