ಹನೂರು: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರ ಬಂಧನ
Update: 2019-08-04 22:42 IST
ಹನೂರು, ಆ.4: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಘಟನೆ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹನೂರು ತಾಲೂಕಿನ ರಾಮಾಪುರ ಸಮೀಪದ ಎಂ.ಜಿ ದೊಡ್ಡಿ ಬಸ್ ನಿಲ್ದಾಣದ ಬಳಿ ರವಿವಾರ ದಾಳಿ ನಡೆಸಿದ ರಾಮಾಪುರ ಠಾಣೆ ಪಿಎಸ್ಐ ಮನೋಜ್ ಕುಮಾರ್ ಹಾಗೂ ಸಿಬ್ಬಂದಿಯು, ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕೊಲೆಂದೆರಾಜು ಮತ್ತು ಬಿಲವೇಂದ್ರ ಎಂಬವರನ್ನು ಬಂಧಿಸಿ ಅವರಿಂದ ಸುಮಾರು 54 ಮದ್ಯ ಪೌಚ್ ಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.