'ಜೈ ನರೇಂದ್ರ‌ ಮೋದಿ': 370ನೇ ವಿಧಿ ರದ್ದತಿ ಬಗ್ಗೆ ಕೆ.ಎಸ್. ಭಗವಾನ್ ಪ್ರತಿಕ್ರಿಯೆ

Update: 2019-08-06 13:24 GMT

ಮೈಸೂರು, ಆ.6: ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಗತಿಪರ ಚಿಂತಕ ಕೆ.ಎಸ್. ಭಗವಾನ್ ಶ್ಲಾಘಿಸಿದ್ದು, ಅಚ್ಚರಿಗೆ ಕಾರಣವಾಗಿದೆ.

'ಸುಮಾರು 72 ವರ್ಷಗಳಿಂದ ಸಂಕಟದಲ್ಲಿ ನರಳುತ್ತಿದ್ದ ಕಾಶ್ಮೀರದ ಜನತೆಯಲ್ಲಿ ನಮ್ಮ ನೆಚ್ಚಿನ ನರೇಂದ್ರ ಮೋದಿ ಅವರು ಆರ್ಟಿಕಲ್‌ 370 ರದ್ದು ಮಾಡುವ ಮೂಲಕ ದೇಶವನ್ನು ಸಂತಸ‌ ಪಡಿಸಿದ್ದಾರೆ. ಪ್ರತಿದಿನ ವ್ಯರ್ಥವಾಗಿ ಖರ್ಚಾಗುತ್ತಿದ್ದ 7-8 ಕೋಟಿ ರೂ. ಗಳನ್ನು ಇನ್ನು ಮುಂದೆ ಅಭಿವೃದ್ಧಿಗಾಗಿ ಬಳಸಲು ಅನುಕೂಲವಾಗುತ್ತದೆ' ಎಂದಿದ್ದಾರೆ.

'ಆರ್ಟಿಕಲ್‌ 370 ರದ್ದು ಮಾಡುವ ಮೂಲಕ ಮೋದಿ ಹಾಗೂ ಕೇಂದ್ರ ಸರಕಾರ ಇಡೀ ದೇಶವನ್ನು ಒಂದೇ ಸಂವಿಧಾನದಡಿ ತಂದದ್ದು ಶ್ಲಾಘನೀಯ. ಪ್ರಧಾನಿ ನರೇಂದ್ರ ಮೋದಿ ಇನ್ನು ಮುಂದೆ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುತ್ತಾರೆ ಎನ್ನಲು ಹೆಮ್ಮೆ ಹಾಗೂ ಸಂತೋಷ ಆಗುತ್ತದೆ. ಜೈ ನರೇಂದ್ರ‌ ಮೋದಿ' ಎಂದು ಕೆ.ಎಸ್.ಭಗವಾನ್ ಬಣ್ಣಿಸಿದ್ದಾರೆ.

ಸದಾ ಬಿಜೆಪಿ, ಆರೆಸ್ಸೆಸ್, ಸಂಘಪರಿವಾರದ‌ ವಿರುದ್ಧ ಮಾತನಾಡುತ್ತಿದ್ದ ಕೆ.ಎಸ್.ಭಗವಾನ್ ಅವರು ಆರ್ಟಿಕಲ್‌ 370, 35a ರದ್ದು ಮಾಡಿದ್ದ ಮೋದಿ ಕ್ರಮವನ್ನು ಮಾಧ್ಯಮ ಪ್ರಕಟಣೆ ಮೂಲಕ ಗುಣಗಾನ ಮಾಡಿ ಅಚ್ಚರಿ ಮೂಡಿಸಿದ್ದು, ಚರ್ಚೆಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News