ಬೆಳಗಾವಿ-ಧಾರವಾಡ ಜಿಲ್ಲೆಗಳ ಶಾಲೆ-ಕಾಲೇಜುಗಳಿಗೆ ಆ.7 ರಂದು ರಜೆ ಘೋಷಣೆ
Update: 2019-08-06 20:42 IST
ಬೆಳಗಾವಿ, ಧಾರವಾಡ, ಆ.6: ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯಾದ್ಯಂತ ನಿರಂತರವಾಗಿ ಧಾರಾಕಾರವಾಗಿ ಮಳೆ ಆಗುತ್ತಿರುವುದರಿಂದ ಜಿಲ್ಲೆಯ ಎಲ್ಲ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ಆ.7 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ನಂತರ ಬರುವ ರವಿವಾರ ದಿನಗಳಂದು ಶಾಲಾ-ಕಾಲೇಜುಗಳನ್ನು ನಡೆಸಿ ಶಾಲಾ-ಕಾಲೇಜು ಬೋಧನಾ ಕಲಿಕಾ ಅವಧಿಯನ್ನು ಸರಿದೂಗಿಸಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.