370ನೇ ವಿಧಿ ರದ್ದತಿ ಸ್ವಾಗತಾರ್ಹ: ಪ್ರೊ.ಮಹೇಶ್ ಚಂದ್ರಗುರು

Update: 2019-08-06 15:27 GMT

ಮೈಸೂರು,ಆ.6: ಕೇಂದ್ರ ಸರ್ಕಾರ 370ನೇ ವಿಧಿ ರದ್ಧತಿಗೆ ಲೋಕಸಭೆ, ರಾಜ್ಯಸಭೆ ಮತ್ತು ರಾಷ್ಟ್ರಪತಿಗಳ ಅನುಮೋದನೆ ಹಾಗೂ ಅಂಕಿತಗಳನ್ನು ಪಡೆದು ದೇಶದ ಏಕೀಕರಣಕ್ಕೆ ಪೂರಕವಾದ ಐತಿಹಾಸಿಕ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ತಿಳಿಸಿದ್ದಾರೆ. 

ಈಗ ಜಮ್ಮು ಮತ್ತು ಕಾಶ್ಮೀರಗಳಿಗೆ ವಿಧಾನಸಭೆಯನ್ನು ಒಳಗೊಂಡ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ಮತ್ತು ಲಡಾಕ್ ಪ್ರಾಂತ್ಯಕ್ಕೆ ವಿಧಾನಸಭೆ ರಹಿತ ಕೇಂದ್ರಾಡಳಿತ ಸ್ಥಾನಮಾನ ನೀಡುವುದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ವಾಸ್ತವವಾಗಿ ಹಿಂದೂಗಳೇ ಹೆಚ್ಚಾಗಿರುವ ಜಮ್ಮು, ಮುಸಲ್ಮಾನರೇ ಹೆಚ್ಚಾಗಿರುವ ಕಾಶ್ಮೀರ ಮತ್ತು ಬೌದ್ಧರೇ ಹೆಚ್ಚಾಗಿರುವ ಲಡಾಕ್ ಪ್ರಾಂತ್ಯಗಳನ್ನು ಮೂರು ಪ್ರತ್ಯೇಕ ವಿಧಾನಸಭೆಗಳನ್ನೊಳಗೊಂಡ ಕೇಂದ್ರಾಡಳಿತ ಪ್ರದೇಶಗಳೆಂದು ಪರಿಗಣಿಸುವುದು ಸ್ಥಳೀಯರ ಜನಾಭಿಪ್ರಾಯ, ಉತ್ತಮ ಆಡಳಿತ ಮತ್ತು ಸುರಕ್ಷಿತ ಪ್ರಗತಿ ದೃಷ್ಟಿಯಿಂದ ಉತ್ತಮವಾದ ಕ್ರಮವಾಗಿದೆ. 

ಏನೇ ಆಗಲಿ, ಸಂವಿಧಾನದ 370ನೇ ವಿಧಿ ರದ್ದುಪಡಿಸಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರವನ್ನು ಸಮಗ್ರ ಭಾರತದ ಅವಿಭಾಜ್ಯ ಅಂಗವೆಂದು ಪರಿಗಣಿಸಿ ಅಭಿವೃದ್ಧಿಯ ಹೊಸ ಶಕೆಗೆ ಮುನ್ನುಡಿ ಬರೆದಿರುವುದನ್ನು ಬಹುಸಂಖ್ಯಾತ ಶಾಂತಿಪ್ರಿಯ ಭಾರತೀಯರು ಸ್ವಾಗತಿಸಲೇಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News