ಕೊಡಗಿನಲ್ಲಿ ಭೂ ಕುಸಿತ :4 ಸಾವು
Update: 2019-08-09 14:07 IST
ಮಡಿಕೇರಿ, ಆ.9: ಕೊಡಗಿನಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರಿದಿದ್ದು, ಭಾಗಂಡಲ ಸಮೀಪದ ಕೊರಂಗಾಲದಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಮಣ್ಣಿನಡಿಗೆ ಸಿಲುಕಿ ನಾಲ್ವರು ಮೃತಪಟ್ಟಿದ್ದಾರೆ. ಓರ್ವ ಮಣ್ಣಿನಡಿಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಒಟ್ಟು ಐವರು ಗುಡ್ಡಕುಸಿತದಿಂದ ಮಣ್ಣನಡಿ ಸಿಲುಕಿದ್ದಾರೆ. ಈ ಪೈಕಿ ನಾಲ್ವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕೊಡಗಿನ 14 ಕಡೆಗಳಲ್ಲಿ ಭೂ ಕುಸಿತ ಸಂಭವಿಸಿದೆ.
ವರುಣನ ಆರ್ಭಟಕ್ಕೆ ಮಲೆನಾಡು ತತ್ತರಿಸಿದ್ದು, ಶಿವಮೊಗ್ಗ ನಗರ ಸಂಫೂರ್ಣ ಜಲಾವೃತಗೊಂಡಿದೆ. ಜೋಗ ಜಲಪಾತದ ಪಕ್ಕದ ಪುರಾತನ 'ಬಾಂಬೆ ಬಂಗ್ಲೋ ' ಇರುವ ಗುಡ್ಡ ಕುಸಿದಿದೆ.