ಮನೆ ಕುಸಿತ: ಗಾಯಾಳು ಮಹಿಳೆಯನ್ನು 10 ಕಿ.ಮೀ ಹೆಗಲ ಮೇಲೆ ಹೊತ್ತು ತಂದ ಗ್ರಾಮಸ್ಥರು

Update: 2019-08-09 13:56 GMT

ಚಿಕ್ಕಮಗಳೂರು, ಆ.9: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆಯೊಂದು ಕುಸಿದು ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಗ್ರಾಮಸ್ಥರು 10 ಕಿ.ಮೀ ಹೊತ್ತು ತಂದ ಮನಕಲಕುವ ಘಟನೆ ಶುಕ್ರವಾರ ಕಳಸದಲ್ಲಿ ನಡೆದಿದೆ.

ಕಳಸ ಪಟ್ಟಣದಿಂದ 10 ಕಿ.ಮೀ ದೂರದ ಕಲ್ಕೋಡು ಗ್ರಾಮದಲ್ಲಿ ಸರೋಜಾ ಎಂಬವರ ಮನೆ ಮಳೆಗೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಸರೋಜಾ ಅವರಿಗೆ ಗಂಭೀರವಾದ ಗಾಯವಾಗಿದ್ದು, ಕಳಸ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಡಿತವಾಗಿದ್ದರಿಂದ ಗ್ರಾಮಸ್ಥರು ಮರದ ಕಂಬ ಹಾಗೂ ಕಂಬಳಿ ಬಳಸಿಕೊಂಡು ಸುಮಾರು 10 ಕಿ.ಮೀ ದೂರದವರೆಗೂ ಹೆಗಲ ಮೇಲೆ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಣಕಲ್ ಸುತ್ತಮುತ್ತ ಸುರಿದ ಧಾರಕಾರ ಮಳೆಗೆ ಬಾಳೂರು ಸುತ್ತಮುತ್ತ ಹಲವು ಮನೆ ಕುಸಿದು ಬಿದಿದ್ದು ಮನೆ ಕಳೆದುಕೊಂಡವರಿಗೆ ಕೊಟ್ಟಿಗೆಹಾರ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರದಲ್ಲಿ ನೆಲೆ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News