​ಮಲೆನಾಡು ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಆರ್ಭಟ

Update: 2019-08-10 06:50 GMT

ಚಿಕ್ಕಮಗಳೂರು, ಆ.10: ಮಲೆನಾಡು ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಭದ್ರಾ ನದಿ ಪ್ರವಾಹದ ಮಟ್ಟ ಮೀ ಹರಿಯುತ್ತಿದೆ. ಬಾಳೆಹೊನ್ನೂರು ಪಟ್ಟಣಕ್ಕೂ ಭದ್ರಾ ನದಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
 ಭದ್ರಾ ನ ಆರ್ಭಟಕೆ ಚಿಕ್ಕಮಗಳೂರು ತಾಲೂಕಿ ಖಾಂಡ್ಯ ಬಾಳಗದ್ದೆ ತೂಗುಸೇತು ನೀರಿನಲ್ಲಿ ಕೊಚ್ಚಿ ಹೋಗಿದೆ. ಇದರಿಂದ ಬಾಳಗದ್ದೆ ಗ್ರಾಮಕ್ಕೆ ಸಂಪರ್ಕ ಕೊಂಡಿ ಇಲ್ಲವಾಗಿದೆ. ಇಲ್ಲಿರುವ ಸುಮಾರು 50ಕ್ಕೂ ಅಧಿಕ ಕುಟುಂಬಗಳು ಅತಂತ್ರರಾಗಿದ್ದು, ಆತಂಕದಿಂದ ಕಾಲ ಕಳೆಯುಂತಾಗಿದೆ.
ಬಳಿಕ ಸೇತುವೆ ಬಳಿಯ ಮನೆಗಳಿಂದ ರಾತ್ರಿಯ ವೇಳೆ ಜನರನ್ನು ಅಧಿಕಾರಿಗಳು, ಪೊಲೀಸರು, ಅಗ್ನಿಶಾಮ ದಳ ಸಿಬ್ಬಂದಿ ಸೇರಿ ಬೋಟ್ ಮೂಲಕ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.
ಭದ್ರಾ ನದಿ ನೀರು ಬಾಳೆಹೊನ್ನೂರು ಪಟ್ಟಣಕ್ಕೆ ನುಗ್ಗಿದೆ. ಕಳಸ-ಬಾಳೆಹೊನ್ನೂರು ರಸ್ತೆ ಜಲಾವೃತಗೊಂಡಿದೆ. ಮೂಡಿಗೆರೆಯಲ್ಲೂ ಭಾರಿ ಮಳೆ, ಹಲವು ಸೇತುವೆ, ರಸ್ತೆ ಹೇಮಾವತಿ, ಜಪಾವತಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ.
ನೆರೆ ನೀರಿನಿಂದ ಚಿಕ್ಕಮಗಳೂರು, ಬಾಳೆಹೊನ್ನೂರು, ಜಯಪುರ, ಕೊಪ್ಪ, ಶೃಂಗೇರಿ ಸಂಪರ್ಕ ರಸ್ತೆ ಬಂದ್ ಆಗಿದೆ.
ಜಿಲ್ಲೆಯ ಮಲೆನಾಡು ಬಾಗದಲ್ಲಿ ವಾಹ ಸಂಚಾರ, ಸಾರಿಗೆ ಬಸ್ಸುಗಳ ಓಡಾಟವು ಸ್ಥಗಿತಗೊಂಡಿದ್ದು, ಒಟ್ಟಾರೆಯಾಗಿ ಇಡೀ ಜನಜೀವನ ಅಸ್ತವ್ಯಸ್ತಗೊಂಡಿದೆ.
ಈ ನಡುವೆ ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆಯಿಂದ ಮಳೆಯಬ್ಬರ ಒಂದಿಷ್ಟು ಕಡಿಮೆಯಾದಂತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News