ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿದ ಒಳ ಹರಿವು

Update: 2019-08-10 16:28 GMT

ಬಳ್ಳಾರಿ, ಆ.10: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಾಗಿದ್ದು, ಹರಪನಹಳ್ಳಿ, ಹಡಗಲಿ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ನೆರೆ ಹಾವಳಿ ಭೀತಿ ಉಂಟಾಗಿದೆ. ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಪ್ರತಿನಿತ್ಯ ತುಂಗಭದ್ರ ಜಲಾಶಯಕ್ಕೆ 10 ಟಿಎಂಸಿ ನೀರು ಹರಿದು ಬರುತ್ತಿದೆ. ಇದರಿಂದ ಈ ಭಾಗದ ಗ್ರಾಮಗಳಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ತುಂಗಾ ಹಾಗೂ ಭದ್ರಾದಿಂದ ಹೊರ ಹೋಗುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ತುಂಗಭದ್ರ ಜಲಾಶಯದ ಆಪರೇಶನ್ ಷೆಡ್ಯೂಲ್‌ನ ಪ್ರಕಾರ ಕೇಂದ್ರ ಜಲ ಆಯೋಗದ ನೀರಿನ ಗೇಜನ ಪ್ರಮಾಣದಂತೆ ತುಂಗಭದ್ರಾ ಜಲಾಶಯಕ್ಕೆ 2,26,016 ಕ್ಯೂಸೆಕ್ಸ್ ಒಳಹರಿವು ಇರುವುದರಿಂದ ಜಲಾಶಯದಿಂದ ಸುಮಾರು 25 ಸಾವಿರ ಕ್ಯೂಸೆಕ್ಸ್ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತದೆ.

ಪ್ರತಿನಿತ್ಯ ಹಾನಿಗಳ ವಿವರಗಳನ್ನು ತಲುಪಿಸಬೇಕು ಎಂದು ಜಿಲ್ಲಾಡಳಿತ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದೆ. ಹಾಗೂ ಹಾನಿಗೀಡಾದವರ ಕುಟುಂಬಕ್ಕೆ ವಿಪತ್ತು ನಿಧಿ ಅಡಿ 3 ದಿನದೊಳಗೆ ಪರಿಹಾರ ನೀಡಬೇಕಲ್ಲದೇ, ಈ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ ತೋರಬಾರದು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News