×
Ad

ಭಟ್ಕಳ: ಮುಂದುವರಿದ ಮಳೆ ಅವಾಂತರ; ಮನೆಗೋಡೆ, ಮರಗಳು ಬಿದ್ದು ಲಕ್ಷಾಂತರ ರೂ ಹಾನಿ

Update: 2019-08-11 17:25 IST

ಭಟ್ಕಳ: ತಾಲೂಕಿನ ಮಳೆಯ ಆರ್ಭಟ ಮುಂದುವರೆದಿದ್ದು ಶನಿವಾರ ಇಡೀ ದಿನ ಮಳೆ ಸುರಿದರೆ ರವಿವಾರ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಶನಿವಾರ ಬಿದ್ದ ಮಳೆಯಿಂದಾಗಿ ರಾತ್ರಿ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಹಲವು ಮನೆಗಳ ಗೋಡೆ ಕುಸಿತ, ಮರಗಳು, ವಿದ್ಯುತ್ ಕಂಬ ಉರುಳಿ ಬಿದ್ದ ಪರಿಣಾಮ ಲಕ್ಷಾಂತರ ರೂ. ಹಾನಿಯಾದ ಬಗ್ಗೆ ವರದಿಯಾಗಿದೆ. 

ಆ.10 ರ ಬೆಳಗ್ಗೆ 8ಗಂಟೆಯಿಂದ ಆ.11, 8 ಗಂಟೆ ವರೆಗೆ 24 ಗಂಟೆಗಳಲ್ಲಿ 134.2ಮಿಮೀ ಮಳೆ ದಾಖಲಾಗಿದೆ. ಮಳೆಗಾಲದ ಆರಂಭದಿಂದ ಇದುವರೆಗೆ ಭಟ್ಕಳ ತಾಲೂಕಿನಲ್ಲಿ 3002.4 ಮಿಮೀ ಮಳೆ ದಾಖಲಾಗಿರುವ ಕುರಿತು ವರದಿಯಾಗಿದೆ.

ಶಿರಾಲಿ 1 ಗ್ರಾಮದ ಹಿರೆಹಿತ್ಲ ಮಜರೆಯ ನಾಗಮ್ಮ ಕೋಂ ಮಂಜಪ್ಪ ನಾಯ್ಕ ಇವರ ಮನೆ ಗಾಳಿ ಮಳೆಗೆ ಹಂಚು ಹಾರಿಹೊಗಿದ್ದು ಅಂದಾಜು 10,000 ಹಾನಿಯುಂಟಾಗಿದೆ. ತಾಲೂಕಿನ ಹೆಬಳೆ ಗ್ರಾಮದ ಹೊನ್ನೆಗದ್ದೆ ಮಜರೆಯಲ್ಲಿ ಶುಕ್ರವಾರ ರಾತ್ರಿ ಬಿಸಿದ ಭಾರಿ ಮಳೆ ಗಾಳಿಗೆ 1.ನಾಗಮ್ಮ ಮೊಳಿಯ ಮೊಗೆರ.50000/-, 2.ನಾಗಯ್ಯ ಗೊಯ್ದ ಮೊಗೆರ 8000/-, 3.ನಾಗಮ್ಮ ನಾರಾಯಣ ಮೊಗೆರ. 8000/-, 4.ಲಕ್ಷ್ಮಿ ಮಂಜುನಾಥ ಮೊಗೆರ, 3000/- ಮತ್ತು 5.ಗಣಪತಿ ಸೋಮಯ್ಯ ಮೊಗೆರ ಇವರ ಮೀನುಗಾರಿಕೆ ದೋಣಿ ಸಮುದ್ರದ ನೀರು ಮೇಲೆ ಉಕ್ಕಿ ಬಂದ ರಭಸಕ್ಕೆ ಕಲ್ಲಿಗೆ ತಾಗಿ 10,000/- ರೂ. ಹಾನಿಯಾಗಿದೆ. 

ಮಾದೇವಿ ವೆಂಕಟ್ರಮಣ ನಾಯ್ಕ ಸಾ.ಮುಂಡಳ್ಳಿ ಇವರ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ನಾರಾಯಣಿ ದುರ್ಗಯ್ಯ ದೇವಾಡಿಗ ಮುಂಡಳ್ಳಿ ಇವರ ವಾಸ್ತವ್ಯದ ಮನೆಯ ಮೇಲೆ ತೆಂಗಿನ ಮರ ಬಿದ್ದು, ಅಂದಾಜು 10,000 ಹಾನಿಯಾಗಿರುದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News