ಗೌರಿ ಲಂಕೇಶ್ ಪ್ರಕರಣದ ತನಿಖಾಧಿಕಾರಿ ಸೇರಿ ರಾಜ್ಯದ 6 ಮಂದಿಗೆ ಕೇಂದ್ರ ಗೃಹಮಂತ್ರಿ ಪದಕ

Update: 2019-08-12 14:04 GMT
ಐಪಿಎಸ್ ಅಧಿಕಾರಿ ಎಂ.ಎನ್ ಅನುಚೇತ್

ಬೆಂಗಳೂರು, ಆ.12: ಕರ್ನಾಟಕದ ಆರು ಮಂದಿ ಪೊಲೀಸ್ ಅಧಿಕಾರಿಗಳು ಕೇಂದ್ರ ಗೃಹಮಂತ್ರಿ ಪದಕ-2019ಗೆ ಭಾಜನರಾಗಿದ್ದಾರೆ.

ಯೂನಿಯನ್ ಹೊಮ್ ಮಿನಿಸ್ಟರ್ಸ್ ಮೆಡಲ್ ಫಾರ್ ಎಕ್ಸಲೆನ್ಸ್ ಇನ್ ಇನ್ವೆಸ್ಟಿಗೇಷನ್ ಫಾರ್-2019 ಪ್ರಶಸ್ತಿಯು ಭಾರತದ ವಿವಿಧ ರಾಜ್ಯಗಳ 96 ಪೊಲೀಸ್ ಅಧಿಕಾರಿಗಳಿಗೆ ಸಿಗುತ್ತಿದ್ದು, ಅದರಲ್ಲಿ ಕರ್ನಾಟಕದ ಆರು ಮಂದಿ ಪೊಲೀಸ್ ಅಧಿಕಾರಿಗಳಿಗೆ ಈ ಪ್ರಶಸ್ತಿ ಒಲಿದು ಬಂದಿದೆ.

ಪ್ರಶಸ್ತಿಗೆ ಭಾಜನರಾದವರು: ಐಪಿಎಸ್ ಅಧಿಕಾರಿ ಎಂ.ಎನ್ ಅನುಚೇತ್, ಡಿವೈಎಸ್ಪಿ ರಂಗಪ್ಪ, ಡಿವೈಎಸ್ಪಿ ರವಿಶಂಕರ್, ಎಸ್.ಪಿ ಜಾಹ್ನವಿ, ಸಿಪಿಐ ಸತೀಶ್ ಮತ್ತು ಇನ್ಸ್ ಪೆಕ್ಟರ್ ರಾಜು.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅತ್ಯುತ್ತಮವಾಗಿ ತನಿಖೆ ನಡೆಸಿದ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿ ಎಂ.ಎನ್ ಅನುಚೇತ್, ಡಿವೈಎಸ್ಪಿ ರಂಗಪ್ಪ ಮತ್ತು ಸಿಪಿಐ ರಾಜು ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಉಳಿದಂತೆ ಕೊಲೆ ಪ್ರಕರಣದಲ್ಲಿ ಉತ್ತಮವಾಗಿ ತನಿಖೆ ನಡೆಸಿದ್ದ ಡಿವೈಎಸ್‍ಪಿ ರವಿಶಂಕರ್, ಎಸ್‍ಪಿ ಜಾಹ್ನವಿ, ಸಿಪಿಐ ಸತೀಶ್ ಅವರಿಗೆ ಪ್ರಶಸ್ತಿ ಒಲಿದು ಬಂದಿದೆ.

ನವದೆಹಲಿಯಲ್ಲಿ ಆಗಸ್ಟ್ 19ರಂದು ಕೇಂದ್ರ ಗೃಹಮಂತ್ರಿ ಪದಕ-2019 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News