ಕೊಳ್ಳೇಗಾಲ: ನೆರೆಸಂತ್ರಸ್ತರಿಗೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವತಿಯಿಂದ ಹಾಲು ವಿತರಣೆ

Update: 2019-08-13 18:21 GMT

ಕೊಳ್ಳೇಗಾಲ,ಆ.13: ಪ್ರವಾಹದಿಂದ ಹಾನಿಗೊಳಗಾದ ನೆರೆಸಂತ್ರಸ್ತರಿಗೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವತಿಯಿಂದ ಹಾಲು ವಿತರಣೆ ಮಾಡಿದರು.

ಪಟ್ಟಣದ ಸಾರ್ವಜನಿಕರ ಬಾಲಕಿಯರ ವಿದ್ಯಾರ್ಥಿನಿಲಯ ಹಾಗೂ ವರ್ಗಿಕೃತ ಬಾಲಕರ ವಿದ್ಯಾರ್ಥಿನಿಲಯಗಳಲ್ಲಿ ಸುಮಾರು 700 ಲೀ. ಗುಡ್‍ಲೈಫ್ ಪಾಕ್ಯೆಟ್ ಹಾಲನ್ನು ಚಾಮುಲ್ ಅಧ್ಯಕ್ಷ ಸಿ.ಎಸ್.ಗುರುಮಲ್ಲಪ್ಪರವರು ನೀಡಿದರು.

ನಂತರ ಮಾತನಾಡಿದ ಅವರು, ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರಿನ್ನು ಬಿಟ್ಟ ಹಿನಲ್ಲೆಯಲ್ಲಿ ತಾಲ್ಲೂಕಿನ ಐದಾರು ಗ್ರಾಮಗಳು ಮುಳುಗಡೆಗೊಂಡಿದ್ದು ನೆರೆ ಹಾನಿಗೆ ಒಳಗಾದ ಜನರಿಗೆ ಚಾಮುಲ್ ವತಿಯಿಂದ ಹಾಲು ವಿತರಣೆ ಮಾಡಲಾಗುತ್ತಿದೆ ಎಂದರು.

ಜಿಲ್ಲಾಡಳಿತದ ಅಧಿಕಾರಿಗಳು ಸಂತ್ರಸ್ತರು ಸಹಜ ಸ್ಥಿತಿಗೆ ಮರಳುವಂತೆ ಸೂಕ್ತ ಕ್ರಮ ವಹಿಸಬೇಕು. ಕೆಎಂಎಫ್ ವತಿಯಿಂದ ಇವರಿಗೆ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಕೆಎಂಎಫ್ ಮಧುವನಹಳ್ಳಿ ನಂಜುಂಡಸ್ವಾಮಿ, ಚಾಮುಲ್ ನಿರ್ದೇಶಕ ಕೆ.ಎಂ.ಮಾದಪ್ಪ, ಕೆಎಂಎಫ್ ಮಾಜಿ ನಿರ್ದೇಶಕ ಬಿ.ತೋಟೇಶ್, ಉಪ್ಪಾರ ನಿಗಮ ಮಾಜಿ ರಾಜ್ಯಾಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಮುಖಂಡ ನಾಗರಾಜು, ಒಕ್ಕೂಟದ ಉಪವ್ಯವಸ್ಥಾಪಕ ಜಿ.ಶ್ರೀಕಾಂತ್, ಸಹಾಯಕ ವ್ಯವಸ್ಥಾಪಕ ಶಿವಕುಮಾರ್, ಸಿಬ್ಬಂದಿ ನೂತನ್.ಪಿ. ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News