ರಾಜ್ಯದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವೈದ್ಯಕೀಯ ಕಲಿಕೆಗೆ ಸುವರ್ಣಾವಕಾಶ

Update: 2019-08-14 13:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ. 14: ವಿದೇಶದಲ್ಲಿ ವೈದ್ಯಕೀಯ ಕೋರ್ಸ್(ಎಂಬಿಬಿಎಸ್) ಕಲಿಕೆಗೆ ವಿದ್ಯಾರ್ಥಿ ವೇತನದ ಜತೆಗೆ ಉಚಿತ ಪದವಿ ಪಡೆಯುವ ಸುವರ್ಣಾವಕಾಶವೊಂದನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಕಲ್ಪಿಸಲಾಗಿದೆ.

ವೈದ್ಯಕೀಯ ಶಿಕ್ಷಣದ ಆಕಾಂಕ್ಷಿಗಳಿಗೆ ಮಾಹಿತಿ ಪಡೆಯಲು ಇದೊಂದು ಅವಕಾಶವಿದೆ. ಆ.15ರಿಂದ 17ರ ವರೆಗೆ ರಾಜ್ಯದ ಆಕಾಂಕ್ಷಿಗಳಿಗೆ ವಿಚಾರ ಸಂಕಿರಣ ಹಾಗೂ ಕೌನ್ಸಿಲಿಂಗ್ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದೆ.

ಬೆಂಗಳೂರು ನಗರದಲ್ಲಿ ಆ.15 ಮತ್ತು 17ರ ಬೆಳಗ್ಗೆಯಿಂದ ಸಂಜೆಯ ವರೆಗೆ ರಾಜಾಜಿನಗರದ ನವರಂಗ್ ಚಿತ್ರಮಂದಿರ ಎದುರು ಇರುವ ಮೆಡಿಕಾನ್ ಓವರ್‌ಸಿಸ್‌ನ ಕಚೇರಿಯಲ್ಲಿ ನಡೆಯಲಿದೆ. ಆ.16ರಂದು ಹುಬ್ಬಳ್ಳಿಯಲ್ಲಿ ವಿಚಾರ ಸಂಕಿರಣ ಹಾಗೂ ಕೌನ್ಸಿಲಿಂಗ್ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಉತ್ತರ ಅಮೆರಿಕಾದ ಬಾರ್ಬಿಡೋಸ್‌ನಲ್ಲಿರುವ ಬ್ರಿಡ್ಜ್‌ಟೌನ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿಯ ವೈಸ್ ಛಾನ್ಸಲರ್, ಉತ್ತರ ಅಮೆರಿಕಾದ ಮಾಜಿ ಶಿಕ್ಷಣ ಸಚಿವರಾದ ರೊನಾಲ್ಡ್ ಜೋನ್ಸ್ ಪಾಲ್ಗೊಂಡು ವಿದೇಶದಲ್ಲಿ ಎಂಬಿಬಿಎಸ್ ಪದವಿ ಪಡೆಯುವ ಕುರಿತಂತೆ ವಿವರಣೆ ನೀಡಲಿದ್ದಾರೆ. ಕೌನ್ಸೆಲಿಂಗ್ ಹಾಗೂ ವಿಚಾರ ಸಂಕಿರಣದಲ್ಲಿ ದೇಶದಲ್ಲಿ ಓದುತ್ತಿರುವ ಕರ್ನಾಟಕದ ಹಿರಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡು ತಮ್ಮ ಅನಿಸಿಕೆ ವ್ಯಕ್ತಪಡಿಸಲಿದ್ದಾರೆ. ಅಲ್ಲದೆ, 2019ರ ಬ್ಯಾಚ್‌ನಲ್ಲಿ ಎಂಐಎಸ್‌ಟಿನಲ್ಲಿ ಮೊದಲ ರ‍್ಯಾಂಕ್ ಡಾ.ಸುರೇಶ್‌ಕುಮಾರ್, ಎರಡನೆ ರ‍್ಯಾಂಕ್ ಡಾ.ಶಿವಾನಿ ಪಾಟೀಲ್ ಭಾರತದ ಪ್ರಥಮ ಶ್ರೇಣಿ ಪಡೆದವರು. ನೀಟ್ ಹಾಗೂ ಎಂಐಸಿ/ಎನ್‌ಇಎಕ್ಸ್‌ಟಿ ಪರೀಕ್ಷೆ ಎದುರಿಸುವ ಕುರಿತಂತೆ ಡಾ. ಲಕ್ಷ್ಮೀಕಾಂತ್ ರೆಡ್ಡಿ ವಿವರಣೆ ನೀಡಲಿದ್ದು, ವಿದೇಶದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವಿದೆ ಹಾಗೂ ಭಾರತೀಯ ಶೈಲಿಯ ಊಟೋಪಚಾರ ವ್ಯವಸ್ಥೆ ಇರುತ್ತದೆ. ಆಸಕ್ತರು ಮೊ.ಸಂಖ್ಯೆ-88860 99974ನ್ನು ಮೆಡಿಕಾನ್ ಓವರ್‌ಸೀಸ್‌ನ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News