ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ರಾಜ್ಯದ ಕೈದಿಗಳಿಗಿಲ್ಲ ಬಿಡುಗಡೆಯ ಭಾಗ್ಯ: ಕಾರಣವೇನು ಗೊತ್ತೇ ?

Update: 2019-08-15 05:35 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.14: ಸ್ವಾತಂತ್ರೋತ್ಸವ ದಿನದಂದು ಸನ್ನಡತೆ ಆಧಾರದ ಮೇಲೆ ಜೈಲುವಾಸದಿಂದ ಹೊರಬರಬೇಕಿದ್ದ ಸುಮಾರು 72 ಕ್ಕೂ ಅಧಿಕ ಕೈದಿಗಳಿಗೆ ಬಿಡುಗಡೆಯ ಭಾಗ್ಯವೇ ಇಲ್ಲದಂತಾಗಿದೆ.

ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಸನ್ನಡತೆ ಹಾಗೂ ಮನಪರಿವರ್ತನೆಗೊಂಡ ಕೈದಿಗಳನ್ನು ಶಿಕ್ಷೆಯ ಅವಧಿಗೂ ಮುನ್ನವೇ ಬಿಡುಗಡೆ ಮಾಡಲಾಗುತ್ತದೆ. ಆದರೆ, ರಾಜ್ಯ ಸರಕಾರ ಈ ಸಂಬಂಧ ಯಾವುದೇ ರೀತಿಯ ಗಮನ ಹರಿಸಿಲ್ಲ.

ಬಂಧೀಖಾನೆ ಮತ್ತು ಗೃಹ ರಕ್ಷಕ ಇಲಾಖೆಯು ಬಿಡುಗಡೆಗೆ ಅರ್ಹತೆಯುಳ್ಳವರ ಪಟ್ಟಿ ಸಿದ್ಧಪಡಿಸಿಕೊಂಡಿದೆ. ಆದರೆ, ಸಮ್ಮಿಶ್ರ ಸರಕಾರವನ್ನು ಉರುಳಿದ ಬಳಿಕ ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರೂ, ಇದುವರೆಗೂ ಸಂಪುಟ ರಚನೆಯಾಗಿಲ್ಲ. ಆದುದರಿಂದಾಗಿ ಕೈದಿಗಳ ಬಿಡುಗಡೆಗೂ ಕೂಡಿ ಬಂದಿಲ್ಲ.

ಗೃಹ ರಕ್ಷಕ ಇಲಾಖೆ ನೀಡುವ ಪಟ್ಟಿಗೆ ಸಚಿವ ಸಂಪುಟದ ಅನುಮೋದನೆ ಪಡೆಯಬೇಕಾಗಿದೆ. ಆದರೆ, ಸಂಪುಟವೇ ಇಲ್ಲದಿರುವುದರಿಂದ ಕಡತ ಸಂಪುಟ ಅನುಮೋದನೆಗೆ ಬರಲು ಸಾಧ್ಯವಿಲ್ಲ. ಅಲ್ಲದೆ, ಸಂಪುಟದ ಅನುಮೋದನೆಯಿಲ್ಲದೇ ಕಡತ ರಾಜಭವನಕ್ಕೆ ಸಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ, ಈ ಬಾರಿ ಕೈದಿಗಳಿಗೆ ಬಿಡುಗಡೆ ಭಾಗ್ಯವಿಲ್ಲದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News