ಪೊಲೀಸ್ ವಸತಿ ಗೃಹದಲ್ಲೇ ಚೀಟಿ ವ್ಯವಹಾರ ಆರೋಪ: ಕೆಲಸ ಕಳೆದುಕೊಂಡ ಪೇದೆ

Update: 2019-08-14 17:43 GMT

ಬೆಂಗಳೂರು, ಆ.14: ಪೊಲೀಸ್ ವಸತಿ ಗೃಹದಲ್ಲಿ ಚೀಟಿ ವ್ಯವಹಾರ ನಡೆಸುತ್ತಿದ್ದ ಆರೋಪದಡಿ ಕರ್ನಾಟಕ ಮೀಸಲು ಪಡೆಯ ಪೊಲೀಸ್ ಪೇದೆಯೊಬ್ಬರನ್ನು ನಿವೃತ್ತಗೊಳಿಸಿ, ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.

ಪೇದೆ ಎಸ್.ಎಲ್.ನಾರಾಯಣ ಸ್ವಾಮಿ ಎಂಬುವರನ್ನು ಶಾಶ್ವತವಾಗಿ ನಿವೃತ್ತಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ನಾರಾಯಣ ಸ್ವಾಮಿ, ಇವರ ಪತ್ನಿ ವಿಜಯಲಕ್ಷ್ಮೀ ಜತೆಗೂಡಿ ಹಲವು ವರ್ಷಗಳಿಂದ ಪೊಲೀಸ್ ವಸತಿ ಗೃಹದಲ್ಲಿ ಚೀಟಿ, ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಅಲ್ಲದೆ, ಕೆಲವರಿಗೆ ಹಣ ವಂಚನೆ ಮಾಡಿದ್ದಾರೆಂದು ಆರೋಪ ಕೇಳಿಬಂದಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು.

ಇದರ ಅನ್ವಯ, ಸರಕಾರಿ ಸೇವೆಯಲ್ಲಿ ದುರ್ನಡತೆ, ಅಶಿಸ್ತು ತೋರಿದ ಆರೋಪ ಸಾಬೀತು ಆಗಿರುವ ಹಿನ್ನಲೆ ಅವರನ್ನು ಶಾಶ್ವತವಾಗಿ ನಿವೃತ್ತಿಗೊಳಿಸಿ ಎಂದು 4ನೆ ಬೆಟಾಲಿಯನ್ ಕಮಾಂಡೆಂಟ್ ಅಭಿನವ್ ಖರೆ ಆದೇಶಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News