ಪ್ರವಾಹ ಪೀಡಿತ ಪ್ರದೇಶಕ್ಕೆ ಕೆಎಂಎಫ್‌ನಿಂದ ಹಾಲು ಸರಬರಾಜು

Update: 2019-08-14 18:09 GMT

ಬೆಂಗಳೂರು, ಆ.14: ಪ್ರವಾಹ ಪೀಡಿತ ಪ್ರದೇಶಗಳ ನೆರೆ ಸಂತ್ರಸ್ತರಿಗೆ ಪೌಷ್ಟಿಕಾಂಶಯುಕ್ತ ಆಹಾರಗಳು ಬೇಕಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಹಾಲು ಒಕ್ಕೂಟವು ನೆರವು ನೀಡಲು ಮುಂದಾಗಿದೆ.

ಕೋಲಾರ ಮತ್ತು ದಕ್ಷಿಣ ಕನ್ನಡ ಹಾಲು ಒಕ್ಕೂಟಗಳು ಸುಮಾರು 8 ಸಾವಿರ ಲೀಟರ್ ಗುಡ್ ಲೈಫ್ ಹಾಲನ್ನು ಉತ್ತರ ಕರ್ನಾಟಕದ ನೆರೆ ಪೀಡಿತರಿಗೆ ಪೂರೈಸುತ್ತಿದೆ. ಕರ್ನಾಟಕದಲ್ಲಿ ಒಟ್ಟು 14 ಹಾಲು ಒಕ್ಕೂಟಗಳಿದ್ದು, ಐದು ಉತ್ತರ ಕರ್ನಾಟಕದಲ್ಲಿವೆ. ಉತ್ತರ ಕರ್ನಾಟಕದಲ್ಲಿನ ಹಾಲು ಒಕ್ಕೂಟವು ಆರೂವರೆ ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿದ್ದು, ಸದ್ಯಕ್ಕೆ 70-80 ಸಾವಿರ ಲೀಟರ್‌ಗೆ ಉತ್ಪಾದನೆ ಕುಸಿದಿದೆ.

ಬೆಳಗಾವಿ, ವಿಜಯಪುರ, ಧಾರವಾಡ, ಬಳ್ಳಾರಿ ಹಾಗೂ ಕಲಬುರ್ಗಿ ಜಿಲ್ಲೆಗಳಿಗೂ ಪ್ರವಾಹದ ಬಿಸಿ ತಟ್ಟಿದೆ. ಹಾಲನ್ನು ಹೊರತು ಪಡಿಸಿ ಕೆಎಂಎಫ್ ಜಾನುವಾರಗಳಿಗೆ 50 ಸಾವಿರ ಕೆಜಿ ಮೇವು ಪೂರೈಸಿದೆ. ಇನ್ನೂ 25 ಸಾವಿರ ಕೆಜಿ ಪಶು ಆಹಾರ ಪೂರೈಸಲು ಕೆಎಂಎಫ್ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News