ದಸರಾ ಸರಳ ಆಚರಣೆ ತಾಯಿ ಶ್ರೀಚಾಮುಂಡೇಶ್ವರಿಗೆ ಅವಮಾನ: ತನ್ವೀರ್ ಸೇಠ್

Update: 2019-08-15 18:54 GMT

ಮೈಸೂರು,ಆ.15: ರಾಜ್ಯದಲ್ಲಿ ಪ್ರವಾಹ ಅತಿವೃಷ್ಠಿ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಗೆ ಶಾಸಕ ತನ್ವೀರ್ ಸೇಠ್ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಳ ದಸರಾದಿಂದ ಪ್ರವಾಸೋಧ್ಯಮಕ್ಕೆ ಹೊಡೆತ ಬಿಳುತ್ತದೆ. ಅದಕ್ಕಾಗಿ ಸರಳ ದಸರಾ ಬದಲು ಅದ್ದೂರಿ ದಸರಾ ಮಾಡಲಿ ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ತನ್ವೀರ್ ಸೇಠ್ ಒತ್ತಾಯ ಮಾಡಿದ್ದಾರೆ.

ಕಷ್ಟದಲ್ಲೇ ಜನರು ದೇವರ ಹತ್ತಿರ ಹೋಗೋದು. ಈಗ ರಾಜ್ಯದ ಜನತೆ  ಕಷ್ಟದಲ್ಲಿ  ಇದ್ದಾರೆ. ದಸರಾವನ್ನು ಸರಳವಾಗಿ ಆಚರನೆ ಮಾಡಿದರೆ ತಾಯಿ ಶ್ರೀಚಾಮುಂಡೇಶ್ವರಿಗೆ ಅವಮಾನ. ರಾಜ್ಯದ ಕಷ್ಟವನ್ನು ನೀಗಿಸಲು ತಾಯಿ ಶ್ರೀಚಾಮುಂಡೇಶ್ವರಿ ದೇವರನ್ನು ಪೂಜಿಸಬೇಕು. ಪೂಜಿಸಬೇಕು. ಅದಕ್ಕಾಗಿ ಅದ್ದೂರಿ ದಸರಾ ಆಚರಣೆ ಮಾಡಬೇಕು ಎಂದು ತನ್ವೀರ್ ಸೇಠ್ ತಿಳಿಸಿದರು. 

ಹಿಂದಿನ ಸರ್ಕಾರದ ಅವಧಿಯಲ್ಲಿ ಫೋನ್ ಕದ್ಧಾಲಿಕೆ ಆಗಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ ಎಂದು  ಆರೋಪಿಸಿದ್ದ ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾತ್ ಅವರಿಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ. ನಮ್ಮ ಸರ್ಕಾರದಲ್ಲಿ ಫೋನ್ ಕದ್ದಾಲಿಕೆ ಆಗಿಲ್ಲ. ಒಂದು ವೇಳೆ ಫೋನ್ ಕದ್ದಾಲಿಕೆ ಆಗಿದ್ದರೆ ಸಮಗ್ರ ತನಿಖೆ ಆಗಲಿ. ಎಚ್.ವಿಶ್ವನಾಥ್ ಹೇಳುವ ಮಾತು ಸತ್ಯವಾಗಿದ್ದರೆ ಸಿಬಿಐ ತನಿಖೆ ಮಾಡಲಿ ಎಂದು ಹೇಳಿದರು.

ಫೋನ್ ಕದ್ದಾಲಿಕೆಗೆ ಸರ್ಕಾರದಲ್ಲಿ ಅವಕಾಶ ಇದೆ. ದೇಶದ, ರಾಜ್ಯದ ಭದ್ರತೆಗಾಗಿ ಫೋನ್ ಕದ್ದಾಲಿಕೆ ಮಾಡಬಹುದು. ಆದರೆ ಜನಪ್ರತಿನಿಧಿಗಳ ಫೋನ್ ಕದ್ದಾಲಿಕೆ ಮಾಡೋದು ತಪ್ಪು. ವಿಶ್ವನಾಥ್ ಹೇಳುವ ಮಾತು ಸತ್ಯವಾಗಿದ್ದರೆ ಸಿಬಿಐ ತನಿಖೆ ತನಿಖೆ ಮಾಡಿಸಲಿ ಎಂದು ತನ್ವೀರ್ ಸೇಠ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News