ಅತಿವೃಷ್ಟಿಯಿಂದ ಭಾರೀ ಹಾನಿ: ಚಿಕ್ಕಮಗಳೂರಿನ ಈ ಜಿಲ್ಲಾ, ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ನಿಷೇಧ

Update: 2019-08-16 14:45 GMT

ಚಿಕ್ಕಮಗಳೂರು.ಆ.16: ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ಎನ್.ಆರ್ ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿ ರಸ್ತೆ, ಸೇತುವೆ, ಮೋರಿಗಳು ಹಾನಿಯಾಗಿವೆ. ವಾಹನ ಸಂಚಾರಿಸಲು ಕಷ್ಟ ಸಾಧ್ಯವಾಗಿರುವ ಹಿನ್ನಲೆಯಲ್ಲಿ ಈ ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ಪುನರ್ ಸ್ಥಾಪನಾ ಕಾರ್ಯ ಪ್ರಗತಿಯಲ್ಲಿದೆ. ಆದ್ದರಿಂದ ಈ ಕೆಳಕಂಡ ರಸ್ತೆಗಳಲ್ಲಿ ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳ 1989ರ ನಿಯಮ 221(ಎ)(5) ರ ಪ್ರದತ್ತವಾದ ಅಧಿಕಾರ ಚಲಾಯಿಸಿ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

ಮೂಡಿಗೆರೆ ತಾಲೂಕಿನ ಗಂಗಾಮೂಲ, ಕೊಟ್ಟಿಗೆಹಾರ ರಾಜ್ಯ ಹೆದ್ದಾರಿ 66, ಕೊಟ್ಟಿಗೆಹಾರ-ಬಾಳೂರು-ನಿಡುವಾಳೆ-ಮಾಗುಂಡಿ-ಬಾಳೆಹೊಳೆ, ಕಳಸ-ಸಂಸೆ-ಕುದುರೆಮುಖ 91.31 ಕಿ.ಮೀ ವ್ಯಾಪ್ತಿಯಲ್ಲಿ ಆಗಸ್ಟ್ 17 ರವರೆಗೆ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿದ್ದು, ಬದಲಿ ಮಾರ್ಗವಾಗಿ ಚಿಕ್ಕಮಗಳೂರಿನಿಂದ ಹೊರನಾಡಿಗೆ ಹೋಗುವ ವಾಹನಗಳು ಚಿಕ್ಕಮಗಳೂರು ಆಲ್ದೂರು-ಬಾಳೆಹೊನ್ನೂರು-ಮಾಗುಂಡಿ-ಬಾಳೆಹೊಳೆ-ಕಳಸ ಮಾರ್ಗವಾಗಿ ಸಂಚರಿಸಬಹುದೆಂದು ಅವರು ತಿಳಿಸಿದ್ದಾರೆ.

ಮೂಡಿಗೆರೆ ತಾಲೂಕಿನ ರಾ.ಹೆ.106ರ ಹೊರನಾಡು-ಕಳಸ-ಹೆಬ್ಬಾಳೆ ಸೇತುವೆ, ಮರಸಣಿಗೆ-ಹಿರೇಬೈಲು-ಅಬ್ಬರಗುಡಿಗೆ-ಮಾಸ್ತಿಖಾನ್‍ ಎಸ್ಟೇಟ್-ಸುಂಕಸಾಲೆ-ಕೆಳಗೂರು-ಜಾವಳಿ-ಬಾಳೂರು ಹ್ಯಾಂಡ್ ಪೋಸ್ಟ್ ವರೆಗಿನ 41.70 ಕಿ.ಮೀ ವ್ಯಾಪ್ತಿಯಲ್ಲಿ ಆಗಸ್ಟ್ 17ರವರಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಿದ್ದು, ಬದಲಿ ಮಾರ್ಗವಾಗಿ ಮೂಡಿಗೆರೆ-ಆಲ್ದೂರು--ಬಾಳೆಹೊನ್ನೂರು-ಮಾಗುಂಡಿ-ಬಾಳೆಹೊಳೆ-ಕಳಸ ಮಾರ್ಗವಾಗಿ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.

ಮೂಡಿಗೆರೆ ತಾಲೂಕಿನ ಹುಳುವಳ್ಳಿ ಹೊರನಾಡು ಜಿಲ್ಲಾ ಮುಖ್ಯರಸ್ತೆಯ 6.70 ಕಿ.ಮೀ  ವ್ಯಾಪ್ತಿಯಲ್ಲಿ ಆಗಸ್ಟ್ 19 ರವರೆಗೆ ಎಲ್ಲಾ ರೀತಿಯ ವಾಹನಗಳನ್ನು ನಿರ್ಬಂಧಿಸಲಾಗಿದೆ. ಬದಲಿ ಮಾರ್ಗವಾಗಿ ಮೂಡಿಗೆರೆ-ಆಲ್ದೂರು-ಬಾಳೆಹೊನ್ನೂರು-ಮಾಗುಂಡಿ-ಬಾಳೆಹೊಳೆ-ಕಳಸ ಮಾರ್ಗವಾಗಿ ಸಂಚರಿಸಬಹುದು. ಇದೇ ತಾಲೂಕಿನ ಬಾಳೆಹೊಳೆ-ಹಿರೇಬೈಲು ಮುಖ್ಯರಸ್ತೆಯ ಬೂದಿಗುಂಡಿ-ಚಿನ್ನಹಡ್ಲು, ಮಲ್ಲೇಶನಗುಡ್ಡ- ಬಾಳಹೊಳೆಯ 16 ಕಿ.ಮೀ, ವ್ಯಾಪ್ತಿಯಲ್ಲಿ ಆಗಸ್ಟ್ 19 ರವರೆಗೆ ಎಲ್ಲಾರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದ್ದು, ಬದಲಿ ಮಾರ್ಗವಾಗಿ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ತಾಲೂಕಿನ ಸುಂಕಸಾಲೆ, ಮರಸೆಣಿಗೆ ಜಿಲ್ಲಾ ಮುಖ್ಯರಸ್ತೆಯ ಬದಲಿಗೆ, ಮೈದಾಡಿ ಕಿರುಗಲಮನೆ-ಮರಸಣಿಗೆ 13.80 ಕಿ.ಮೀ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 15 ರವರೆಗೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿದ್ದು, ಬದಲಿ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ತಾಲೂಕಿನ ಕೆ.ಕೆಳಗೂರು, ಮರಸಣಿಗೆ ಜಿಲ್ಲಾ ಮುಖ್ಯರಸ್ತೆಯ 8 ಕಿ.ಮೀ ವ್ಯಾಪ್ತಿಯಲ್ಲಿ ಆಗಸ್ಟ್ 17 ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಿದ್ದು, ಬದಲಿ ಮಾರ್ಗವಾಗಿ ಸಂಚರಿಸಲು ಅವಕಾಶವಿಲ್ಲ. ಕೂವೆ ಮಾಲಿಂಗನಾಡು, ನೇರಂಕಿ ಜಿಲ್ಲಾ ಮುಖ್ಯರಸ್ತೆಯ ಕೂವೆ-ಮಾಲಿಂಗನಾಡು-ಬಿಳಗಲಿ-ನೇರಂಕಿ ರಸ್ತೆಯ 16.60  ಕಿ.ಮೀ ವ್ಯಾಪ್ತಿಯಲ್ಲಿ ಆಗಸ್ಟ್ 19 ವರಗೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಿದ್ದು, ಬದಲಿ ಮಾರ್ಗವಾಗಿ ಸಂಚರಿಸಲು ಅವಕಾಶವಿಲ್ಲ.

ಕೊಪ್ಪ ತಾಲೂಕಿನ ಕಚಿಗೆ ಮೇಗೂರು ಜಿಲ್ಲಾ ಮುಖ್ಯರಸ್ತೆಯ ಗಡಿಕಲ್ಲು-ಹೆಗ್ಗಾರುಕೊಡಿಗೆ-ಕೊಗ್ರೆಯ 19.90 ಕಿ.ಮೀ ವ್ಯಾಪ್ತಿಯಲ್ಲಿ ಆಗಸ್ಟ್ 30 ರವರಗೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಿದ್ದು, ಬದಲಿ ಮಾರ್ಗವಾಗಿ ಗಡಿಕಲ್ಲು-ಹೆಗ್ಗಾರುಕೊಡಿಗೆ-ಕೊಗ್ರೆ ಮಾರ್ಗವಾಗಿ ಸಂಚರಿಸಬಹುದು. ಇದೇ ತಾಲೂಕಿನ ಹೊರನಾಡು-ಬಲಿಗೆ-ಮೆಣಸಿನಹಾಡ್ಯ ಜಿಲ್ಲಾ ಮುಖ್ಯರಸ್ತೆಯ 8 ಕಿ.ಮೀ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 15 ರವರೆಗೆ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಿದ್ದು, ಬದಲಿ ಮಾರ್ಗವಾಗಿ ಜಯಪುರ-ಬಸರೀಕಟ್ಟೆ-ಬಾಳೆಹೊಳೆ-ಕಳಸ -ಹೊರನಾಡು ಮಾರ್ಗವಾಗಿ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News