ಓ ಮೆಣಸೇ…

Update: 2019-08-18 18:26 GMT

ಪ್ರಧಾನಿ ಮೋದಿ ಮತ್ತು ಅಮಿತ್‌ಶಾ ಅವರು ಕೃಷ್ಣ - ಅರ್ಜುನರಿದ್ದಂತೆ - ರಜನಿಕಾಂತ್, ನಟ

ಎನ್‌ಟಿಆರ್ ಕಾಲದಲ್ಲಿ ಹುಟ್ಟಿದಿದ್ದರೆ ಇವರನ್ನು ಬಳಸಿಕೊಂಡು ಮಹಾಭಾರತ ಸಿನೆಮಾವನ್ನು ಅದ್ಭುತವಾಗಿ ತೆಗೆಯಬಹುದಿತ್ತು.

---------------------

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆಯು ಗಾಂಧಿ ಕುಟುಂಬದ ಸಂಗೀತ ಕುರ್ಚಿ ಆಟದಂತಿದೆ - ಸಂಬಿತ್ ಪಾತ್ರಾ, ಬಿಜೆಪಿ ವಕ್ತಾರ
  ಇವಿಎಂ ಬಳಸಿ ಆಯ್ಕೆ ಮಾಡಿದ್ದಿದ್ದರೆ ಅದರ ಅಧ್ಯಕ್ಷರಾಗಿ ಅಮಿತ್ ಶಾ ಆಯ್ಕೆಯಾಗುತ್ತಿದ್ದರು.

---------------------

ಗಾಂಧಿ ಕುಟುಂಬ ಬಿಟ್ಟರೆ ಕಾಂಗ್ರೆಸ್‌ಗೆ ಬೇರೆ ಗತಿ ಇಲ್ಲ - ಅಮಿತ್ ಮಾಳವೀಯ, ಬಿಜೆಪಿ ನಾಯಕ
  ಕುಟುಂಬವೇ ಇಲ್ಲದಾತನ ನಾಯಕತ್ವಕ್ಕಿಂತ ವಾಸಿ.

---------------------

ಮಾತನಾಡುವ ಕಂಪ್ಯೂಟರನ್ನು ಅನ್ವೇಷಿಸಬೇಕಾದರೆ ಅದು ಸಂಸ್ಕೃತ ಭಾಷೆಯಿಂದ ಮಾತ್ರ ಸಾಧ್ಯ - ರಮೇಶ್‌ಪೊಕ್ರಿಯಾಲ್, ಕೇಂದ್ರ ಸಚಿವ
ದಲಿತರು ಅದರ ಜೊತೆಗೆ ಯಾವ ಭಾಷೆಯಲ್ಲಿ ಮಾತನಾಡಬೇಕು?

---------------------

ನಾನು ಕ್ರಿಕೆಟ್ ಮೈದಾನದಲ್ಲಿ ಡ್ಯಾನ್ಸ್‌ಮಾಡುವ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ - ವಿರಾಟ್‌ಕೊಹ್ಲಿ, ಭಾರತ ಕ್ರಿಕೆಟ್ ತಂಡದ ನಾಯಕ
ಸಿನೆಮಾದಲ್ಲಿ ಅನುಷ್ಕಾ ಶರ್ಮಾ ಕ್ರಿಕೆಟ್ ಆಡುವುದೊಂದು ಬಾಕಿ ಉಳಿದಿದೆ.

---------------------

ಭಾರತ ಜಗತ್ತಿನ ಅತ್ಯುತ್ತಮ ಹೂಡಿಕೆ ಸ್ನೇಹಿ ರಾಷ್ಟ್ರ ಎಂಬ ವಿಶ್ವಾಸ ಉದ್ಯಮಿಗಳಲ್ಲಿ ಹುಟ್ಟುವಂತೆ ಮಾಡುತ್ತೇವೆ - ನರೇಂದ್ರಮೋದಿ, ಪ್ರಧಾನಿ
ಇಷ್ಟೆಲ್ಲ ವಿದೇಶ ಪ್ರಯಾಣ ಮಾಡಿ, ಇನ್ನೂ ಅವರಲ್ಲಿ ವಿಶ್ವಾಸ ಹುಟ್ಟಿಸುವಲ್ಲಿ ನೀವು ಯಶಸ್ವಿಯಾಗಿಲ್ಲವೇ?

---------------------

ನಾನು ಯಾವತ್ತೂ ಉಪರಾಷ್ಟ್ರಪತಿಯಾಗಲು ಬಯಸಿರಲಿಲ್ಲ - ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ
ಅಂದರೆ ನೇರ ರಾಷ್ಟ್ರಪತಿ ಕಡೆಗೆ ಕಣ್ಣಿದ್ದಿರಬೇಕು.

---------------------

ಅಂದುಕೊಂಡ ಹಾಗೆ ಬದುಕಬೇಕು ಎನ್ನುವುದೇ ನನ್ನ ಬಾಳಿನ ಮೂಲಮಂತ್ರ - ಪ್ರಿಯಾಂಕಾ ಚೋಪ್ರಾ, ನಟಿ
ಸದ್ಯಕ್ಕೆ ಅದು ಸಿನೆಮಾ ಜಗತ್ತಿನಲ್ಲಷ್ಟೇ ಸಾಧ್ಯ ಅನ್ನಿಸುತ್ತದೆ.

---------------------

ನೆರೆ ಸಂತ್ರಸ್ತರಿಗೆ ನೆರವಾಗದಿದ್ದಲ್ಲಿ ಸರಕಾರವನ್ನು ಉರುಳಿಸುತ್ತೇನೆ - ಬಾಲಚಂದ್ರ ಜಾರಕಿಹೊಳಿ, ಶಾಸಕ
ಅತೃಪ್ತ ರೋಗ ಲಕ್ಷಣ ಎದ್ದು ಕಾಣುತ್ತಿದೆ.

---------------------

ಜಮ್ಮು ಕಾಶ್ಮೀರದಲ್ಲಿ ಯಾವುದೇ ಪರಿಸ್ಥಿತಿ ನಿಭಾಯಿಸಲು ಸಿದ್ಧ - ಬಿಪಿನ್‌ರಾವತ್, ಸೇನಾ ಮುಖ್ಯಸ್ಥ
ಅಲ್ಲಿಯ ಜನರ ಬದುಕನ್ನು ಬಲಿಕೊಟ್ಟಾದರೂ ಸರಿ...

---------------------

ಭಾರತದ ನೂರನೇ ಸ್ವಾತಂತ್ರೋತ್ಸವದ ಹೊತ್ತಿಗೆ ಕಾಶ್ಮೀರ ಈ ದೇಶದ ಭಾಗವಾಗಿರುವುದಿಲ್ಲ - ವೈಕೋ, ಎಡಿಎಂಕೆ ಮುಖ್ಯಸ್ಥ
ಆ ಸಾಧನೆ ನನ್ನ ಅವಧಿಯಲ್ಲೇ ನಡೆಯಬೇಕು ಎನ್ನುತ್ತಿದ್ದಾರಂತೆ ಮೋದಿ.

---------------------

ನಾನು ನನ್ನ ಕುಟುಂಬದವರ ಜೊತೆ ಪೋನ್‌ನಲ್ಲಿ ಮಾತನಾಡಿದ್ದನ್ನು ಎಚ್.ಡಿ.ಕುಮಾರಸ್ವಾಮಿ ಕದ್ದಾಲಿಕೆ ಮಾಡಿದ್ದು ಸರಿಯಲ್ಲ - ಎಚ್.ವಿಶ್ವನಾಥ್, ಮಾಜಿ ಸಚಿವ
ಅಂತಹದನ್ನೆಲ್ಲ ಖಾಸಗಿ ಕೋಣೆಯಲ್ಲೇ ಮಾತನಾಡಿ ಮುಗಿಸಬೇಕಾಗಿತ್ತು.

---------------------

ಪೂರ್ವಾಗ್ರಹ ಪೀಡಿತ ಸಮಾಜದ ಬದಲಿಗೆ 'ಬದುಕಿರಿ, ಬದುಕಲು ಬಿಡಿ' ಎನ್ನುವಂತಹ ಸಮಾಜವನ್ನು ನಿರ್ಮಿಸಬೇಕು - ರಾಮನಾಥ ಕೋವಿಂದ್, ರಾಷ್ಟ್ರಪತಿ
ಈ ದೇಶದ ದಲಿತರಿಗೆ ನೀಡಿದ ಕರೆಯೇ?

---------------------

ಮುಖ್ಯಮಂತ್ರಿ ಕುರ್ಚಿ ಶಾಶ್ವತ ಅಲ್ಲ ಎಂದು ನಾನು ಪದೇ ಪದೇ ಹೇಳುತ್ತಿದ್ದೆ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಹಾಗೆ ಪದೇ ಪದೇ ಹೇಳಿಕೆ ನೀಡಿದ್ದೇ ಮುಳುವಾಗಿರಬೇಕು.

---------------------

ಅನರ್ಹ ಶಾಸಕರಿಗೆ ಬಿಜೆಪಿಯವರೇ ಗೋರಿ ಕಟ್ಟುತ್ತಿದ್ದಾರೆ - ಡಿ.ಕೆ.ಶಿವಕುಮಾರ್, ಮಾಜಿ ಸಚಿವ
ನೀವು ಹೂವಿನ ಬೊಕ್ಕೆ ಹಿಡಿದು ಕಾಯುತ್ತಿರಬೇಕು, ಅಲ್ಲವೇ?

---------------------

ಕಾಶ್ಮೀರಿಗಳ ಸ್ವಾತಂತ್ರಕ್ಕಾಗಿ ಯುದ್ಧಕ್ಕೂ ರೆಡಿ - ಇಮ್ರಾನ್‌ಖಾನ್, ಪಾಕ್ ಪ್ರಧಾನಿ
ಯಾರ ಜೊತೆ? ಕಾಶ್ಮೀರಿಗಳ ಜೊತೆಯೇ?

---------------------

ನಾನು ಬರೆದ ಪುಸ್ತಕಗಳು ಮುಂದೆ ಎಷ್ಟು ದಿನ ಬದುಕುತ್ತವೆ ಎಂಬುದು ನನ್ನ ಪಾಲಿಗೆ ಎಲ್ಲಕ್ಕಿಂತ ಮುಖ್ಯವಿಚಾರ - ಎಸ್.ಎಲ್.ಭೈರಪ್ಪ, ಸಾಹಿತಿ
ಸದ್ಯಕ್ಕೆ ಲೈಬ್ರರಿಗಳ ಗೆದ್ದಲುಗಳು ಉಳಿಸಿದರೆ...

---------------------

370ನೇ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಲು ಡಾ.ಅಂಬೇಡ್ಕರ್ ಬಹಳ ವಿರೋಧ ವ್ಯಕ್ತಪಡಿಸಿದ್ದರು - ಯಡಿಯೂರಪ್ಪ, ಮುಖ್ಯಮಂತ್ರಿ
ಹಿಂದೂ ಆಗಿ ಸಾಯಲಾರೆ ಎಂದು ಅಂಬೇಡ್ಕರ್ ಹೇಳಿದ್ದರು.

---------------------

ಜಮ್ಮು - ಕಾಶ್ಮೀರದ ಈಗಿನ ಪರಿಸ್ಥಿತಿಯ ಬಗ್ಗೆ ನನಗಂತೂ ತುಂಬಾ ತೃಪ್ತಿಯಿದೆ - ಸತ್ಯಪಾಲ್ ಮಲ್ಲಿಕ್, ಜಮ್ಮು - ಕಾಶ್ಮೀರ ರಾಜ್ಯಪಾಲ
ಕಾಶ್ಮೀರಿಗಳಲ್ಲೂ ಆ ತೃಪ್ತಿ ಕಾಣಬೇಡವೇ?

---------------------

ಸಣ್ಣ ಕುಟುಂಬವೇ ನಿಜವಾದ ದೇಶಪ್ರೇಮ - ನರೇಂದ್ರ ಮೋದಿ, ಪ್ರಧಾನಿ
ಜನಸಂಖ್ಯಾ ನಿಯಂತ್ರಣಕ್ಕಾಗಿ ಪತ್ನಿಯನ್ನು ತೊರೆದೆ ಎನ್ನಲಿಲ್ಲ ಸದ್ಯ.

---------------------

ಕಾಶ್ಮೀರದಲ್ಲೂ ರಾಷ್ಟ್ರಧ್ವಜ ಹಾರುತ್ತಿರುವುದು ನಮ್ಮ ದಿಟ್ಟತನದ ಸಂಕೇತ - ಅರವಿಂದ ಲಿಂಬಾವಳಿ, ಶಾಸಕ
ಸದ್ಯಕ್ಕೆ ತಾವು ಹಾರಿಸಿದ ಧ್ವಜ ವೀಡಿಯೋಗಳಲ್ಲಿ ಹರಿದಾಡುತ್ತಿರುವುದು ಯಾವ ತನದ ಸಂಕೇತ?

---------------------

ಕೇಂದ್ರ ಸರಕಾರ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ - ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಹತ್ತಿಕ್ಕುವಷ್ಟು ವಿರೋಧ ಪಕ್ಷಗಳು ಬಲಿಷ್ಠವಾಗಿಲ್ಲ.

---------------------

ದೇಶವು ಮಹನೀಯರ ಕನಸುಗಳನ್ನು ನನಸಾಗಿಸುವ ಪ್ರಯತ್ನದಲ್ಲಿದೆ - ಭಯ್ಯಜಿ ಜೋಷಿ, ಆರೆಸ್ಸೆಸ್ ಪ್ರ.ಕಾರ್ಯದರ್ಶಿ

ಆ ಮಹನೀಯರಲ್ಲಿ ಅಗ್ರಸ್ಥಾನದಲ್ಲಿ ಮನು ಇದ್ದಾನೆ ಎನ್ನುವುದೂ ಗೊತ್ತಿದೆ

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...