ಮೀಸಲಾತಿ ಕುರಿತು ಚರ್ಚೆಗೆ ಕರೆ ಒಂದು ನೆಪ ಮಾತ್ರ: ಪ್ರಿಯಾಂಕಾ

Update: 2019-08-20 14:48 GMT

ಹೊಸದಿಲ್ಲಿ,ಆ.20: ಮೀಸಲಾತಿಯ ಕುರಿತು ಚರ್ಚೆ ನಡೆಯಬೇಕು ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಮೋದಿ ಸರಕಾರವು ಜನಪರ ಕಾನೂನುಗಳನ್ನು ಉಸಿರುಗಟ್ಟಿಸುತ್ತಿದೆ ಮತ್ತು ಸಾಮಾಜಿಕ ನ್ಯಾಯ ಆರೆಸ್ಸೆಸ್-ಬಿಜೆಪಿಯ ನಿಜವಾದ ದಾಳಿಯ ಗುರಿಯಾಗಿದೆ ಎಂದು ಹೇಳಿದ್ದಾರೆ.

‘ಆರೆಸ್ಸೆಸ್ ಅತಿಯಾದ ವಿಶ್ವಾಸವನ್ನು ಹೊಂದಿದೆ ಮತ್ತು ಅದರ ಉದ್ದೇಶಗಳು ಅಪಾಯಕಾರಿಯಾಗಿವೆ. ಬಿಜೆಪಿಯು ಜನಪರ ಕಾನೂನುಗಳನ್ನು ಉಸಿರುಗಟ್ಟಿಸುತ್ತಿದ್ದರೆ ಆರೆಸ್ಸೆಸ್ ಕೂಡ ಮೀಸಲಾತಿಯ ಕುರಿತು ಚರ್ಚೆಯ ವಿಷಯವನ್ನೆತ್ತಿದೆ. ಚರ್ಚೆ ಒಂದು ನೆಪವಷ್ಟೇ. ಸಾಮಾಜಿಕ ನ್ಯಾಯ ಆರೆಸ್ಸೆಸ್-ಬಿಜೆಪಿಯ ನಿಜವಾದ ದಾಳಿಯ ಗುರಿ’ ಎಂದು ಮಂಗಳವಾರ ಟ್ವೀಟಿಸಿರುವ ಪ್ರಿಯಾಂಕಾ,‘ನೀವು ಇದನ್ನು ಸಂಭವಿಸಲು ಅವಕಾಶ ನೀಡುತ್ತೀರಾ ’ಎಂದು ಜನತೆಯನ್ನು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News