ಪ್ರವಾಸಿಗರ ಸಂಖ್ಯೆಯಾಧರಿಸಿ ಇ-ಪ್ರವಾಸಿ ವೀಸಾ ಶುಲ್ಕ ನಿಗದಿ: ಪ್ರಹ್ಲಾದ್ ಪಟೇಲ್

Update: 2019-08-20 16:44 GMT

ಹೊಸದಿಲ್ಲಿ, ಆ.20: ಭಾರತವು ಪ್ರವಾಸಿಗರ ಸಂಖ್ಯೆಯನ್ನು ಆಧರಿಸಿದ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಇ-ಪ್ರವಾಸಿ ವೀಸಾ ಶುಲ್ಕ ನಿಗದಿ ವ್ಯವಸ್ಥೆಯನ್ನು ಪರಿಚಯಿಸಲಿದೆ.

ಆ ಪ್ರಕಾರ, ಹೆಚ್ಚು ಪ್ರವಾಸಿಗರು ಆಗಮಿಸುವ ಜುಲೈಯಿಂದ ಮಾರ್ಚ್ ಅವಧಿಯಲ್ಲಿ ಹೆಚ್ಚು ಶುಲ್ಕ ಮತ್ತು ಕಡಿಮೆ ಪ್ರವಾಸಿಗರು ಆಗಮಿಸುವ ಎಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಕಡಿಮೆ ಶುಲ್ಕ ಪಡೆಯಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಮಂಗಳವಾರ ತಿಳಿಸಿದ್ದಾರೆ.

ರಾಜ್ಯ ಸರಕಾರಗಳ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪ್ರತಿನಿಧಿಗಳ ಜೊತೆ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪಟೇಲ್, ಭಾರತಕ್ಕೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಎಪ್ರಿಲ್‌ನಿಂದ ಜೂನ್‌ವರೆಗೆ ಮೂವತ್ತು ದಿನಗಳ ಅವಧಿಗೆ 10 ಡಾಲರ್‌ಗೆ ಹಾಗೂ ಜುಲೈಯಿಂದ ಮಾರ್ಚ್ ಅವಧಿಗೆ 25 ಡಾಲರ್‌ಗೆ ಇ-ಟೂರಿಸ್ಟ್ ವೀಸ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ನೂತನ ಶುಲ್ಕ ನಿಯಮಕ್ಕೆ ಗೃಹ ಸಚಿವಾಲಯ ಈಗಾಗಲೇ ಅನುಮತಿ ನೀಡಿದ್ದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶೀಘ್ರದಲ್ಲೇ ಅನುಮತಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News