ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ: ಪ್ರತಿ ಕ್ಷೇತ್ರಕ್ಕೆ 2 ಕೋಟಿ ಬಿಡುಗಡೆ- ಸಿಎಂ ಯಡಿಯೂರಪ್ಪ

Update: 2019-08-21 17:00 GMT

ಬೆಂಗಳೂರು, ಆ.21: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ 2 ಕೋಟಿ ರೂ.ನೀಡಲಾಗುತ್ತಿದ್ದು, ಕ್ರಿಯಾ ಯೋಜನೆಯನ್ನು ಸಲ್ಲಿಸಿ, ಅನುಮೋದನೆ ಪಡೆದುಕೊಂಡು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಯೋಜನೆಯ ಪ್ರಗತಿಯನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಲು 2018-19ನೆ ಸಾಲಿನಲ್ಲಿ ಶಾಸಕರು ನೀಡುವ ಪ್ರಸ್ತಾವನೆಯನ್ನು ಹಾಗೂ ಹಿಂದೆ ನೀಡಿದ ಕಾಮಗಾರಿಗಳ ವಸ್ತುಸ್ಥಿತಿ, ಪ್ರಗತಿಗೆ ಸಂಬಂಧಿಸಿದಂತೆ ವರ್ಕ್‌ಸಾಫ್ಟ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಇದರಿಂದ, ಆರ್ಥಿಕ, ಭೌತಿಕ ಪ್ರಗತಿಯನ್ನು ತ್ವರಿತಗತಿಯಿಂದ ಸಾಧಿಸಲು ಉದ್ದೇಶಿಸಲಾಗಿದೆ. 2018-19ನೆ ಕ್ರಿಯಾ ಯೋಜನೆಯ ಮಾಹಿತಿಯಂತೆ 11 ಶಾಸಕರು ಹಾಗೂ 24 ವಿಧಾನ ಪರಿಷತ್ ಸದಸ್ಯರು ಪ್ರಸ್ತಾವನೆ ಸಲ್ಲಿಸದೇ ಇರುವುದು, ಉಳಿದ ಶಾಸಕರು(ವಿಧಾನಸಭೆ, ವಿಧಾನ ಪರಿಷತ್) ಸಂಪೂರ್ಣ 2 ಕೋಟಿ ರೂ.ಗೆ ಕಾಮಗಾರಿಗಳು ನೀಡದಿರುವುದು ಕಂಡು ಬಂದಿದೆ. ಹೀಗಾಗಿ, ಪ್ರಗತಿ ಕುಂಠಿತವಾಗಿದೆ.

ಉಳಿದ ಮೊತ್ತಕ್ಕೆ 2019-20ನೆ ಸಾಲಿನ 2 ಕೋಟಿ ರೂ.ಕಾಮಗಾರಿಗಳ ಪ್ರಸ್ತಾವನೆಯನ್ನು ಡಿಸಿಗಳಿಗೆ ತುರ್ತಾಗಿ ನೀಡಲು ಕೋರಿದೆ. ಈ ಪೈಕಿ ಅಂಗನವಾಡಿ ಸೇರಿ ಇನ್ನಿತರ ಕಟ್ಟಡಗಳ ಕಾಮಗಾರಿಗಳನ್ನು ನರೇಗ ಜತೆಗೆ ಕ್ರೋಡೀಕರಿಸಿ ತೆಗೆದುಕೊಂಡರೆ ಕ್ಷೇತ್ರದ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಭಾವಿಸಿದ್ದೇನೆ ಎಂದು ಬಿಎಸ್‌ವೈ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News