ಕೋಲಾರ: ಸಂಭ್ರಮದ ಜಾನಪದೋತ್ಸವ

Update: 2019-08-22 16:00 GMT

ಕೋಲಾರ,ಆ.22: ಕಣ್ಮರೆಯಾಗುತ್ತಿರುವ ಗ್ರಾಮೀಣ ಪರಿಕರಗಳು, ಜಾನಪದ ಸಂಸ್ಕೃತಿ ಮತ್ತು ಜಾನಪದ ಸಾಹಿತ್ಯವನ್ನು ಕಾಪಾಡಿ ಮುಂದಿನ ಪೀಳಿಗೆಗೆ ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬೆಗ್ಲಿ ಹೊಸಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಾ ಬಾಲಗೋವಿಂದ ಅಭಿಪ್ರಾಯ ವ್ಯಕ್ತಪಡಿಸಿದರು. 

ತಾಲೂಕಿನ ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯತ್ ಹಾಗೂ ಪಂಚಾಯತ್ ವ್ಯಾಪ್ತಿಯ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಾನಪದೋತ್ಸವ ಕಾರ್ಯಕ್ರಮದ ನಂತರ ವಾರ್ತಾಭಾರತಿ ಜೊತೆ ಮಾತನಾಡಿದರು .

ಈಗಿನ ತಲೆಮಾರಿನ ಯುವಜನತೆ ಮೊಬೈಲ್ ಫೋನ್ ಮತ್ತು ಟಿ.ವಿ. ಮಾದ್ಯಮಗಳ ಮಧ್ಯೆ ಸಿಲುಕಿ ಸಂಕೀರ್ಣ ಮನೋಭಾವ ಬೆಳೆಸಿಕೊಳ್ಳಬಾರದು, ಬದಲಾಗಿ ನಮ್ಮ ಹಿರಿಯರ ಬಳುವಳಿಯಾದ ಜಾನಪದ ಕಲೆಗಳು, ಕ್ರೀಡೆಗಳು ಹಾಗೂ ಕಥಾನಕಗಳನ್ನು ಅರಿತು ಸತ್ಪ್ರಜೆಗಳಾಗಬೇಕೆಂದು ಕರೆ ನೀಡಿದರು. 

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಮ್ಮಾ ಆನಂದರೆಡ್ಡಿ ಮಾತನಾಡಿ, ಜಾನಪದ ಕಲೆ ಸಂಸ್ಕೃತಿ ಉಳಿವು ಹಾಗೂ ಬೆಳವಣಿಗೆಗೆ ಸಮಾಜದ ಎಲ್ಲರೂ ಶ್ರಮಿಸಬೇಕಿದೆ ಎಂದು ಕರೆ ನೀಡಿದರು. 

ತಾ.ಪಂ. ಅಧ್ಯಕ್ಷ ಸೂಲೂರು ಆಂಜಿನಪ್ಪ, ಜೆಎಂಎಸ್ ಅಧ್ಯಕ್ಷೆ ವಿ. ಗೀತಾ, ಜಿ. ಪಂ. ಸದಸ್ಯ ಅರುಣ್ ಕುಮಾರ್, ವಕ್ಕಲೇರಿ ರಾಮು, ಬೆಗ್ಲಿ ಸೂರ್ಯಪ್ರಕಾಶ್ ಮಾತನಾಡಿದರು. 

ಇದಕ್ಕೂ ಮೊದಲು ಗ್ರಾಮದ ಮುಖ್ಯ ಬೀದಿಗಳಲ್ಲಿ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳ ವಿಧ್ಯಾರ್ಥಿ ಜಾನಪದ ಕಲಾವಿದರು ಅದ್ಧೂರಿ ಮೆರವಣಿಗೆ ನಡೆಸಿದರು. ಶಾಲೆಯ ಆವರಣದಲ್ಲಿ ವಿವಿಧ ಜಾನಪದ ಪರಿಕರಗಳು, ಗ್ರಾಮೀಣ ಸೊಗಡನ್ನು ನೆನಪಿಸುವ ವಸ್ತ್ರವಿನ್ಯಾಸ,  ಹಬ್ಬಗಳನ್ನು ನೆನಪಿಸುವ ಮತ್ತು ಹಬ್ಬಗಳ ಆಚರಣೆಯ ವಿಶೇಷತೆ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಶಾಲಾ ಮಕ್ಕಳು ನಡೆಸಿಕೊಟ್ಟ ಗ್ರಾಮೀಣ ಸೊಗಡಿನ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. 

ಕಾರ್ಯಕ್ರಮದಲ್ಲಿ ಪಿಡಿಒ ಅಶೋಕ ಕುಮಾರ್, ಗ್ರಾ.ಪಂ.ಉಪಾಧ್ಯಕ್ಷ ಸುರೇಶ್ ಗೌಡ, ತಾ.ಪಂ. ಸದಸ್ಯ ಕೆ.ಶ್ರೀನಿವಾಸ, ಡಾ.ದೊಡ್ಡಯ್ಯ, ಗ್ರೀನ್ ವ್ಯಾಲಿ ಪಬ್ಲಿಕ್ ಶಾಲೆಯ ಮುಖ್ಯಸ್ಥ ಮುನಿಸ್ವಾಮಿ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News