ಚಂದಿರನ ಮೊದಲ ಚಿತ್ರ...!

Update: 2019-08-22 18:27 GMT

ಭಾರತದ ಮಹತ್ವಾಕಾಂಕ್ಷೆಯ ಒಂದು ಸಾವಿರ ಕೋಟಿ ರೂ.ವೆಚ್ಚದ ಚಂದ್ರಯಾನ-2 ತೆಗೆದಿರುವ ಚಂದ್ರನ ಮೊದಲ ಚಿತ್ರವನ್ನು ಇಸ್ರೋ ಗುರುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಆ.21ರಂದು ಚಂದ್ರನ ಮೇಲ್ಮೈನಿಂದ ಸುಮಾರು 2,650 ಕಿ.ಮೀ.ಎತ್ತರದಿಂದ ಈ ಚಿತ್ರವನ್ನು ತೆಗೆಯಲಾಗಿದೆ ಎಂದು ಇಸ್ರೋ ತಿಳಿಸಿದೆ. ಚಂದ್ರನ ಮೇಲಿನ ಎರಡು ಮಹತ್ವದ ಹೆಗ್ಗುರುತುಗಳಾಗಿರುವ ಅಪೋಲೊ ಕುಳಿ ಮತ್ತು ಬಟ್ಟಲಿನಾಕಾರದ ಇನ್ನೊಂದು ಕುಳಿ ಮೇರ್ ಓರಿಯಂಟೇಲ್ ಅನ್ನು ಚಿತ್ರವು ತೋರಿಸಿದೆ.ನಾಸಾದ ಅಪೋಲೊ ಚಂದ್ರ ಅಭಿಯಾನಗಳ ಹೆಸರನ್ನು ಹೊಂದಿರುವ ಅಪೋಲೊ ಕುಳಿಯು 538 ಕಿ.ಮೀ.ಅಗಲವಾಗಿದ್ದು, ಚಂದ್ರನ ದಕ್ಷಿಣ ಗೋಲಾರ್ಧದಲ್ಲಿದೆ. ನಾಸಾ ಹೇಳುವಂತೆ ಅಪೋಲೊದೊಳಗೆ ಹಲವಾರು ಸಣ್ಣ ಕುಳಿಗಳಿದ್ದು, ಇವುಗಳಿಗೆ ದಿವಂಗತ ನಾಸಾ ಗಗನ ಯಾನಿಗಳು ಮತ್ತು ಅಧಿಕಾರಿಗಳ ಹೆಸರುಗಳನ್ನಿರಿಸಲಾಗಿದೆ. ಇಂತಹ ಏಳು ಕುಳಿಗಳು ಬಾಹ್ಯಾಕಾಶ ದಲ್ಲಿ ಭಸ್ಮಗೊಂಡಿದ್ದ ನಾಸಾದ ಕೊಲಂಬಿಯಾ ಅಂತರಿಕ್ಷ ನೌಕೆಯ ಲ್ಲಿದ್ದ ಗಗನಯಾತ್ರಿಗಳ ಹೆಸರುಗಳನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor