ಮೈತ್ರಿ ಸರಕಾರದ ಪತನಕ್ಕೆ ಸಿದ್ದರಾಮಯ್ಯ ಸೂತ್ರದಾರ: ಜಗದೀಶ್ ಶೆಟ್ಟರ್
Update: 2019-08-23 18:56 IST
ಹುಬ್ಬಳ್ಳಿ, ಆ.23: ಮೈತ್ರಿ ಸರಕಾರದ ಪತನಕ್ಕೆ ಸಿದ್ದರಾಮಯ್ಯರವರೇ ಸೂತ್ರದಾರರು ಎಂದು ಸಚಿವ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರ ಬೀಳಿಸಲು ಸಿದ್ದರಾಮಯ್ಯ ಏನು ಮಾಡಿದರು ಎಂಬುದು ದೇವೇಗೌಡಗೆ ಗೊತ್ತಿದೆ. ಹಾಗಾಗಿಯೇ ಈಗ ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯು ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದು ರಾಜಕೀಯ ದ್ವೇಷದಿಂದ ಅಲ್ಲ. ಸಿದ್ದರಾಮಯ್ಯ ಒತ್ತಾಯ ಮಾಡಿದ್ದಕ್ಕೆ ಕೊಡಲಾಗಿದೆ. ಇದರಿಂದ ಸಿದ್ದರಾಮಯ್ಯರಿಗೆ ಸಂತೋಷವಾಗಿದೆ ಎಂದು ತಿಳಿಸಿದರು.