×
Ad

ಶಾಸಕ ಕುಮಾರಸ್ವಾಮಿ ವಿಚ್ಛೇದನ ಪ್ರಕರಣ: ಪತಿ, ಪತ್ನಿಗೆ ಕೆಳ ನ್ಯಾಯಾಲಯದಲ್ಲಿ ಅಹವಾಲು ಸಲ್ಲಿಸಲು ಹೈಕೋರ್ಟ್ ಆದೇಶ

Update: 2019-08-23 21:56 IST

ಬೆಂಗಳೂರು, ಆ.23: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಪತ್ನಿ ಸವಿತಾರೊಂದಿಗೆ ಸಂಸಾರ ಮಾಡಲು ಕೆಳ ನ್ಯಾಯಾಲಯ ಆದೇಶಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿ, ಮೈಸೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಪತಿ, ಪತ್ನಿ ಇಬ್ಬರೂ ಹಾಜರಾಗಿ ಅಹವಾಲು ಸಲ್ಲಿಸಲು ನಿರ್ದೇಶಿಸಿದೆ.

ಈ ಕುರಿತು ಎಂ.ಪಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠದಲ್ಲಿ ಪೂರ್ಣಗೊಂಡು ಆದೇಶ ಕಾಯ್ದಿರಿಸಿತ್ತು. ಶುಕ್ರವಾರ ಆದೇಶ ನೀಡಿದ್ದು, ಮೈಸೂರಿನ ನ್ಯಾಯಾಲಯದಲ್ಲಿಯೇ ಅಹವಾಲು ಸಲ್ಲಿಸಲು ನಿರ್ದೇಶಿಸಿದೆ.

ಮೈಸೂರಿನ ನ್ಯಾಯಾಲಯಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಪತ್ನಿ ಸವಿತಾ ಅವರೊಂದಿಗೆ ಸಂಸಾರ ಮಾಡಲು ಅವಕಾಶ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಮಾನ್ಯ ಮಾಡಿದ್ದ ನ್ಯಾಯಪೀಠವು ಕುಮಾರಸ್ವಾಮಿಗೆ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಲು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕುಮಾರಸ್ವಾಮಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News