ಜೂಜಾಡುತ್ತಿದ್ದ 11 ಮಂದಿಯ ಬಂಧನ: 1.38 ಲಕ್ಷ ರೂ. ನಗದು ಜಪ್ತಿ

Update: 2019-08-24 13:32 GMT

ಮಡಿಕೇರಿ ಆ.24 : ಅಂಗವಿಕಲರ ಕ್ಷೇಮಾಭಿವೃದ್ಧಿ ಕ್ಲಬ್ ಎಂಬ ಹೆಸರಿನ ಕೊಠಡಿಯೊಂದರಲ್ಲಿ ಜೂಜಾಟ ನಡೆಸುತ್ತಿದ್ದ ಹನ್ನೊಂದು ಮಂದಿಯನ್ನು ಬಂಧಿಸಿರುವ ಮಡಿಕೇರಿ ಡಿಸಿಐಬಿ ಸಿಬ್ಬಂದಿಗಳು ಹಾಗೂ ಶನಿವಾರಸಂತೆ ಠಾಣಾ ಪೊಲೀಸರು ಆರೋಪಿಗಳ ಬಳಿಯಿಂದ 1,38,400 ರೂ. ನಗದು ವಶ ಪಡಿಸಿಕೊಂಡಿದ್ದಾರೆ.

ಚಿನ್ನಹಳ್ಳಿ ರಸ್ತೆಯ ಕಟ್ಟಡದಲ್ಲಿ ಡಿ.ಕೆ.ಸುರೇಶ್ ಕುಮಾರ್ ಎಂಬುವವರು ಜೂಜಾಟ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಕ್ಲಬ್‍ನಲ್ಲಿ ಸುರೇಶ್ ಕುಮಾರ್ ಹೊರತು ಪಡಿಸಿದರೆ ಬೇರೆಯವರು ಯಾರೂ ವಿಕಲಚೇತನರಲ್ಲ ಎಂಬುವುದು ತಿಳಿದು ಬಂದಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್ಸ್‍ಪೆಕ್ಟರ್ ಮಹೇಶ್, ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ, ಸಿಬ್ಬಂದಿಗಳಾದ ಹಮೀದ್, ನಿರಂಜನ್, ವಸಂತ, ಅನಿಲ್ ಕುಮಾರ್, ಬೋಪಣ್ಣ, ಲೋಕೇಶ್, ರಘು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News