ಪ.ಬಂಗಾಳದಲ್ಲಿ ಎಡರಂಗದ ಜೊತೆ ಕಾಂಗ್ರೆಸ್ ಮೈತ್ರಿಗೆ ಸೋನಿಯಾ ಒಪ್ಪಿಗೆ

Update: 2019-08-24 18:51 GMT

ಕೋಲ್ಕತಾ,ಆ.24: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2021ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎಡರಂಗದೊಂದಿಗೆ ತನ್ನ ಪಕ್ಷದ ಮೈತ್ರಿಗೆ ಹಸಿರು ನಿಶಾನೆಯನ್ನು ತೋರಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಪ್ರತಿಪಕ್ಷಗಳ ನಡುವೆ ಒಗ್ಗಟ್ಟಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕರೆ ನೀಡಿದ ಬಳಿಕ ಈ ಬೆಳವಣಿಗೆ ನಡೆದಿರುವುದು ಮಹತ್ವವನ್ನು ಪಡೆದುಕೊಂಡಿದೆ.

ಕಾಂಗ್ರೆಸ್-ಎಡರಂಗ ಮೈತ್ರಿಗೆ ಸೋನಿಯಾ ಅನುಮತಿ ನೀಡಿರುವುದನ್ನು ಪ.ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಸೋಮೇಂದ್ರ ನಾಥ ಮಿತ್ರಾ ಅವರು ದೃಢಪಡಿಸಿದ್ದಾರೆ.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಬಿಜೆಪಿಯು ಬಂಗಾಳದಲ್ಲಿ ಇನ್ನಷ್ಟು ಬೇರೂರುವುದನ್ನು ತಡೆಯಲು ಈ ಮೈತ್ರಿ ಅಗತ್ಯವಾಗಿದೆ ಎಂದರು.

ರಾಜ್ಯದಲ್ಲಿ ಸಾರ್ವತ್ರಿಕ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ಭಾರೀ ಸೋಲನ್ನನುಭವಿಸಿರುವ ಎಡರಂಗವು ಈ ಮೈತ್ರಿ ಪ್ರಸ್ತಾವವನ್ನು ಒಪ್ಪಿಕೊಳ್ಳುತ್ತದೆಯೇ ಇಲ್ಲವೇ ಎನ್ನುವುದು ಈಗ ಆಸಕ್ತಿಯ ವಿಷಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News