ಸರಕಾರಿ ಕಚೇರಿ ಧ್ವಂಸ ಪ್ರಕರಣ: ಶಾಸಕ ರೇಣುಕಾಚಾರ್ಯ ಆರೋಪ ಮುಕ್ತ

Update: 2019-08-26 17:03 GMT

ಬೆಂಗಳೂರು, ಆ.26: ಭದ್ರಾ ಜಲಾಶಯದಿಂದ ಶಿವಮೊಗ್ಗದ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಶಿವಮೊಗ್ಗದ ಕಾಡಾ(ನಾಲಾ ಪ್ರದೇಶಾಭಿವೃದ್ಧಿ ಪ್ರಾಧಿಕಾರ) ಕಚೇರಿಗೆ ನುಗ್ಗಿ ಅಧಿಕಾರಿಗಳ ಮೇಲೆ ವೌಖಿಕ ದೌರ್ಜನ್ಯ ನಡೆಸಿದ ಆರೋಪದಿಂದ ಶಾಸಕ ರೇಣುಕಾಚಾರ್ಯ ಅವರನ್ನು ನಗರದ ಜನಪ್ರತಿನಿಧಿಗಳ ಕೋರ್ಟ್ ಮುಕ್ತಗೊಳಿಸಿದೆ.

ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು. 2016ರಲ್ಲಿ ರೇಣುಕಾಚಾರ್ಯ ಅವರು ಸಾವಿರಾರು ಜನ ರೈತರ ಜತೆ ಸೇರಿ ಭದ್ರಾ ಜಲಾಶಯ ಕಚೇರಿಗೆ ರೈತರೊಡನೆ ನುಗ್ಗಿ ಶಿವಮೊಗ್ಗ, ದಾವಣಗೆರೆ ಎರಡು ಜಿಲ್ಲೆಗಳ ಕೆರೆಗಳಿಗೆ ನೀರು ಬಿಡುವಂತೆ ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ರೇಣುಕಾಚಾರ್ಯರ ಕೆಲ ಬೆಂಬಲಿಗರು ಕಚೇರಿ ಒಳಗಡೆ ನುಗ್ಗಿ ಜಲಸಂಪನ್ಮೂಲ ಇಲಾಖೆಯ ಕೆಲವು ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಾಸಿಕ್ಯೂಷನ್ ಅವರು ಆರೋಪಿಗಳ ವಿರುದ್ಧ ಸಮರ್ಪಕವಾಗಿ ಸಾಕ್ಷಾಧಾರಗಳನ್ನು ಒದಗಿಸಿಲ್ಲ. ಹೀಗಾಗಿ, ಆರೋಪಿಗಳನ್ನು ಸಾಕ್ಷಾಧಾರಗಳ ಕೊರತೆಯಿಂದ ಕೈಬಿಡಲಾಗಿದೆ ಎಂದು ನ್ಯಾಯಪೀಠವು ಆದೇಶದಲ್ಲಿ ತಿಳಿಸಿದೆ. ಈ ವೇಳೆ ಶಾಸಕ ರೇಣುಕಾಚಾರ್ಯ ಖುದ್ದಾಗಿ ಕೋರ್ಟ್‌ಗೆ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News