ಕೊಡಗಿನಲ್ಲಿ ಉತ್ತಮ ಮಳೆ: ಹೆದ್ದಾರಿಗೆ ಉರುಳಿದ ಬೃಹತ್ ಮರ- ವಾಹನ ಸಂಚಾರ ಅಸ್ತವ್ಯಸ್ತ
Update: 2019-08-28 18:57 IST
ಮಡಿಕೇರಿ, ಆ.28: ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆ, ಬಿಸಿಲಿನ ಕಣ್ಣಾಮುಚ್ಚಾಲೆಯಾಗುತ್ತಿದೆ. ಇಂದು ಕೆಲವೆಡೆ ಉತ್ತಮ ಮಳೆಯಾಗಿದ್ದು, ಹೆದ್ದಾರಿಯಲ್ಲಿ ಬೃಹತ್ ಮರ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆಯಿತು.
ಮಡಿಕೇರಿ ವ್ಯಾಪ್ತಿಯಲ್ಲಿ ಸಂಜೆ ಸುರಿದ ಮಳೆಗೆ 2 ನೇ ಮೊಣ್ಣಂಗೇರಿ ಸಮೀಪ ಮಂಗಳೂರು ಹೆದ್ದಾರಿಯಲ್ಲಿ ಬೃಹತ್ ಮರ ಉರುಳಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕೆಲವು ಗಂಟೆಗಳ ಬಳಿಕ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಸುಗಮ ಮಾರ್ಗ ಕಲ್ಪಿಸಲಾಯಿತು.
ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು ಮಳೆ 2135.70 ಮಿ.ಮೀ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 3714.64 ಮಿ.ಮೀ ಮಳೆಯಾಗಿತ್ತು.