×
Ad

ಹೊಸದಿಲ್ಲಿಯ ನಿವಾಸಗಳ ಮೇಲಿನ ದಾಳಿ ಪ್ರಕರಣ: ಡಿಕೆಶಿ ಪ್ರಕರಣದ ತೀರ್ಪು ನಾಳೆ ಪ್ರಕಟ

Update: 2019-08-28 21:53 IST

ಬೆಂಗಳೂರು, ಆ.28: ಹೊಸದಿಲ್ಲಿಯಲ್ಲಿ ಐಟಿ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ವಿವರಣೆ ನೀಡಲು ಇಡಿ ನೀಡಿದ್ದ ಸಮನ್ಸ್, ನೋಟಿಸ್ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಗುರುವಾರ ಹೈಕೋರ್ಟ್ ತೀರ್ಪುನ್ನು ಪ್ರಕಟಿಸಲಿದೆ.

ಡಿ.ಕೆ.ಶಿವಕುಮಾರ್ ಮತ್ತು ಆಪ್ತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅರವಿಂದ್‌ ಕುಮಾರ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು.

ಹೊಸದಿಲ್ಲಿಯ ಡಿಕೆಶಿ ಮತ್ತು ಆಪ್ತರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ 8.59 ಕೋಟಿ ಹಣ ಸಿಕ್ಕಿತ್ತು. ಹಣದ ಮೂಲದ ಬಗ್ಗೆ ವಿವರಣೆ ನೀಡಲು ಡಿಕೆಶಿ ಮತ್ತು ಆಪ್ತರಿಗೆ ಸಮನ್ಸ್, ನೋಟಿಸ್ ಜಾರಿಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಡಿಕೆಶಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ನಿವಾಸಗಳಲ್ಲಿ 8.59 ಕೋಟಿ ಹಣ ಪತ್ತೆಯಾದ ಸಂದರ್ಭದಲ್ಲಿ 41 ಲಕ್ಷ ರೂ.ನನ್ನದೆಂದು ಡಿಕೆಶಿ ಒಪ್ಪಿಕೊಂಡಿದ್ದರು. ಹೀಗಾಗಿ, ಉಳಿದ ಹಣದ ಮೂಲದ ಬಗ್ಗೆ ಐಟಿ ಇಲಾಖೆ ತನಿಖೆ ನಡೆಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News