ಜಿಡಿಪಿ ಕುಸಿತದಿಂದ ‘ಅರೆ ಅರ್ಥಿಕ’ ಹಿಂಜರಿತದತ್ತ ಭಾರತ: ಅರ್ಥಶಾಸ್ತ್ರಜ್ಞರ ಕಳವಳ

Update: 2019-09-04 13:42 GMT

ಹೊಸದಿಲ್ಲಿ,ಸೆ.4: 2012ರಿಂದೀಚೆಗೆ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಈಗ ಅತ್ಯಧಿಕ ಕುಸಿತವುಂಟಾಗಿರುವ ಬಗ್ಗೆ ಅಪಾರ ಕಳವಳವುಂಟಾಗಿದೆ. ಅರ್ಥಿಕ ಹಿಂಜರಿತವನ್ನು ತಿರುವುಮುರುವು ಮಾಡುವುದು ನಮ್ಮ ನೀತಿನಿರೂಪಕರಿಗೆ ತೀರಾ ಕಠಿಣವಾಗಿದೆ. ಸತತ ಎರಡು ತ್ರೈಮಾಸಿಕಗಳಲ್ಲಿ ಆರ್ಥಿಕ ಬೆಳವಣಿಗೆ ದರವು ಶೇ.6.6ರ ದೀರ್ಘಾವಧಿ ಪ್ರವೃತ್ತಿಯನ್ನು ಕಂಡಿದೆ. ಭಾರತವು ಪರಿಣಾಮಕಾರಿಯಾಗಿ ಅರೆ ಹಿಂಜರಿತವನ್ನು ಕಾಣುತ್ತಿದೆಯೆಂದು ಮುಂಬೈನ ನಿರ್ಮಲಾ ಬ್ಯಾಂಗ್ ಈಕ್ವಿಟೀಸ್ ಪ್ರೈವೇಟ್ ಲಿಮಿಟೆಡ್‌ನ ಅರ್ಥಶಾಸ್ತ್ರಜ್ಞೆ ಟೆರೆಸಾ ಜಾನ್ ಹೇಳುತ್ತಾರೆ ಎಂದು ಮಂಗಳವಾರ ಪ್ರಕಟವಾದ ವರದಿಯೊಂದು ತಿಳಿಸಿದೆ.

ಸತತ ಎರಡು ವರ್ಷಗಳಲ್ಲಿ ಅರ್ಥಿಕ ಹಿಂಜರಿತ ಕುರಿತ ಜಿಡಿಪಿ(ಒಟ್ಟು ಆಂತರಿಕ ಉತ್ಪನ್ನ)ಯನ್ನು ಕುಸಿಯುವಂತೆ ಮಾಡಿದೆ. ಆಟೋಮೊಬೈಲ್ ಮಾರಾಟವು ಎರಡು ದಶಕಗಳಲ್ಲಿಯೇ ತೀರಾ ಕೆಳಮಟ್ಟಕ್ಕೆ ಕುಸಿಯುವಂತೆ ಮಾಡಿದೆ ಹಾಗೂ ಹಿಂದೂಸ್ತಾನ್ ಲಿವರ್ ಲಿಮಿಟೆಡ್‌ನ ಚೇರ್‌ಮನ್ ಅವರು ತನ್ನ ಕಂಪೆನಿಯು ಉತ್ಪಾದಿಸುವ ಗ್ರಾಹಕ ಸಾಮಾಗ್ರಿಗಳು ಅರ್ಥಿಕ ಹಿಂಜರಿತವನ್ನು ಸಹಿಸಿಕೊಳ್ಳಬಲ್ಲದು, ಅದರೆ ಆರ್ಥಿಕ ಹಿಂಜರಿತದಿಂದ ಮುಕ್ತವಾಗಿಲ್ಲವೆಂದು ಸುಳಿವು ನೀಡಿದ್ದಾರೆ.

ಈ ವರ್ಷದ ಎಪ್ರಿಲ್-ಜೂನ್ ತಿಂಗಳ ಆರಂಭದಲ್ಲಿ ಒಟ್ಟು ಆಂತರಿಕ ಉತ್ಪನ್ನವು ಶೇಕಡ 5ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ದೇಶದಲ್ಲಿ ಅರ್ಥಿಕ ಚಟುವಟಿಕೆಯು ಜುಲೈನಲ್ಲಿಯೂ ದುರ್ಬಲಗೊಳ್ಳುವುದನ್ನು ಮುಂದುವರಿಸಿದೆ. ಹೂಡಿಕೆ ಹಾಗೂ ಖರೀದಿ ಎರಡೂ ಪತನಗೊಂಡಿದೆ. ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ತಳಮಟ್ಟಕ್ಕಿಳಿಯಲಿದೆಯೆಂದು ಅರ್ಥಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

2020ರ ಮಾರ್ಚ್‌ನಲ್ಲಿ ಕೊನೆಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷದೊಳಗೆ 3.3 ಶೇಕಡ ಜಿಡಿಪಿಯ ಬಜೆಟ್ ಕೊರತೆಯನ್ನು ಗುರಿಯನ್ನು ಸರಕಾರವು ಇರಿಸಿಕೊಂಡಿದೆ. ಆದರೆ ರಾಜ್ಯ ಸರಕಾರಗಳು ಹಾಗೂ ಸರಕಾರಿ ಸ್ವಾಮ್ಯದ ಕಂಪೆನಿಗಳ ಸಾರ್ವಜನಿಕ ವಲಯದ ಸಾಲವು ಜಿಡಿಪಿಯ ಶೇ.8ರಷ್ಟಿರುವುದಾಗಿ ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News