31 ಶಿಕ್ಷಕರು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

Update: 2019-09-04 13:56 GMT
ಶೇಕ್ ಆದಂ ಸಾಹೇಬ್ ( ಪ್ರಶಸ್ತಿ ವಿಜೇತ ಶಿಕ್ಷಕ)

ಬೆಂಗಳೂರು, ಸೆ.4: 2019-20 ನೆ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ ಸರಕಾರಿ ಪ್ರಾಥಮಿಕ ಶಾಲಾ ವಿಭಾಗದಿಂದ 20 ಹಾಗೂ ಪ್ರೌಢಶಾಲಾ ವಿಭಾಗದಿಂದ 11 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಆಯ್ಕೆಯಾದವರಿಗೆ ಭಾರತದ ಮೊದಲ ಶಿಕ್ಷಕಿ, ಆಧುನಿಕ ಶಿಕ್ಷಣ ತಾಯಿ ಎಂದೇ ಪ್ರಸಿದ್ಧಿಯಾದ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಕಟನೆ ತಿಳಿಸಿದೆ.

ಪ್ರಶಸ್ತಿ ಪುರಸ್ಕೃತರು:

ಪ್ರಾಥಮಿಕ ಶಾಲಾ ವಿಭಾಗ: ಮಲ್ಲೇಶಪ್ಪಅಡ್ಡೇದಾರ- ವಡ್ಡರಹಟ್ಟಿ ಕ್ಯಾಂಪ್- ಗಂಗಾವತಿ ತಾಲೂಕು, ಜಯಸಿಂಗ್ ಅಂಬುಲಾಲ ಠಾಕೂರ್- ಎಕಲಾರ- ಔರಾದ ತಾಲೂಕು, ಕೆ.ರಮೇಶ್- ಚಿಲ್ಲಪ್ಪನಹಳ್ಳಿ- ಕೋಲಾರ ಜಿಲ್ಲೆ, ಭೀಮಯ್ಯ- ಎಂ.ಟಿ.ಪಲ್ಲಿ- ಯಾದಗಿರಿ ಜಿಲ್ಲೆ, ರಾಜನಗೌಡ ಪತ್ತಾರ- ಕೆಸರಟ್ಟಿ- ಲಿಂಗಸೂಗೂರು ತಾಲೂಕು, ಆಶಾ ಹೆಗಡೆ- ಮೇಳಕುಂದ- ಕಲಬುರ್ಗಿ ಜಿಲ್ಲೆ, ನಾಗಣ್ಣ- ಹೆಬ್ಬಾಳು (ಕುಂಬಾರಕೊಪ್ಪಲು)- ಮೈಸೂರು ಜಿಲ್ಲೆ, ಸಾವಿತ್ರಮ್ಮ- ಸಂಜೀವಿನಿ ನಗರ- ಬೆಂಗಳೂರು ಉತ್ತರ ಆಯ್ಕೆಯಾಗಿದ್ದಾರೆ.

ಸಂಶಿಯಾ- ಹೂಡ್ಲಮನೆ- ಸಿದ್ದಾಪುರ, ಡಿ.ಪದ್ಮ- ಆಲೆಟ್ಟಿ- ಸುಳ್ಯ ತಾಲೂಕು, ಸೋಮಲಿಂಗಪ್ಪ- ಬೆಳವಡಿ- ಬೈಲಹೊಂಗಲ, ಲಿಂಗರಾಜು- ಬಿ.ಗೌಡಗೆರೆ- ಮಂಡ್ಯ ಜಿಲ್ಲೆ, ಎಲ್.ಎನ್.ಉಮಾದೇವಿ- ತಿಂಡ್ಲು- ಆನೇಕಲ್ ತಾಲೂಕು, ಎಸ್.ರತ್ನಕುಮಾರಿ- ಸಮಟಗಾರು- ಹೊಸನಗರ ತಾಲೂಕು, ನಿರ್ಮಲ ರಾಮಚಂದ್ರ ಪತ್ತಾರ- ಶಿರಗುಪ್ಪಿ, ಬಿ.ಉಷಾ- ಬಿ. ಕ್ಯಾಂಪ್ ನಂ.2, ದಾವಣಗೆರೆ ಜಿಲ್ಲೆ, ಮಲ್ಲಿಕಾರ್ಜುನ ಶಿವಲಿಂಗಪ್ಪಭೂಸಗೊಂಡ- ತಿಕೋಟ, ಕೆ.ಎಚ್.ಗೀತಾ- ಯಲಗುಡಿಗೆ- ಚಿಕ್ಕಮಗಳೂರು ಜಿಲ್ಲೆ, ನಾರಾಯಣ- ಸಿದ್ದಯ್ಯನಪುರ- ಚಾಮರಾಜನಗರ ಜಿಲ್ಲೆ, ಉಮೇಶ- ಬಜಗೋಳಿ- ಕಾರ್ಕಳ ತಾಲೂಕು, ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.

ಪ್ರೌಢಶಾಲಾ ವಿಭಾಗ: ಮಂಜಪ್ಪವಿ.ಅಡಿವೇರ- ಸದಾಶಿವನಗರ- ಹಳೆ ಹುಬ್ಬಳ್ಳಿ, ಕವಿತಾ ದಿಗ್ಗಾವಿ- ಗಂಗಾವತಿ, ಆರ್.ನಾರಾಯಣಸ್ವಾಮಿ- ಬಾಶೆಟ್ಟಿಹಳ್ಳಿ- ದೊಡ್ಡಬಳ್ಳಾಪುರ ತಾಲೂಕು, ಶರಣಪ್ಪಕರಿಶೆಟ್ಟಿ- ಕೊಳಬಾಳ- ಮಸ್ಕಿ ತಾಲೂಕು, ಎಚ್.ಆರ್.ರೇಣುಕಯ್ಯ- ಗೂಳೆಹರವಿ- ತುಮಕೂರು ಜಿಲ್ಲೆ, ಚನ್ನೇಗೌಡ- ಮಾಗಡಿ ಪಟ್ಟಣ ಆಯ್ಕೆಯಾಗಿದ್ದಾರೆ.

ಶೇಕ್ ಆದಂ ಸಾಹೇಬ್- ಪಾವಳಪಡೂರು ವಗ್ಗ- ಬಂಟ್ವಾಳ ತಾಲೂಕು, ಹನುಮಪ್ಪ ಗೋವಿಂದಪ್ಪ ಹುದ್ದಾರ- ಕಟಗೇರಿ- ಬಾದಾಮಿ ತಾಲೂಕು, ದಾನಮ್ಮ ಚ.ಝಳಕಿ-ವಂಟಮೂರಿ ಕಾಲನಿ- ಬೆಳಗಾವಿ ಜಿಲ್ಲೆ, ಎನ್.ಕೃಷ್ಣಮೂರ್ತಿ-ಕ್ಯಾಲಕೊಂಡ- ಶಿಗ್ಗಾವಿ ತಾಲೂಕು, ಬಿ.ಆರ್.ರಾಜಶೇಖರ್ ಜಂಗಮಮಠ- ಶಿವನಗರ- ಬೆಂಗಳೂರು ಉತ್ತರ ಜಿಲ್ಲೆ ಆಯ್ಕೆಗೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News