×
Ad

ನಮ್ಮನ್ನು ಕುಗ್ಗಿಸಿದಷ್ಟು ನಾವು ಪುಟಿದೇಳುತ್ತೇವೆ: ಬಿಜೆಪಿ ವಿರುದ್ಧ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕಿಡಿ

Update: 2019-09-04 22:30 IST

ಮೈಸೂರು,ಸೆ.4: ವಿನಾಶಕಾಲೇ ವಿಪರೀತ ಬುದ್ಧಿ ಅಂತಾರೆ, ಹಿಂದೂ ಹಿಂದೂ ಅಂತ ಹೇಳುವವರು, ನಾಲ್ಕು ದಿನ ವಿಚಾರಣೆಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಒಳಪಟ್ಟರೂ, ಒಂದು ದಿನ ಕೂಡಾ ಅವರ ಅಪ್ಪನಿಗೆ ಪೂಜೆ ಮಾಡಲು ಬಿಡಲಿಲ್ಲ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕಿಡಿಕಾರಿದರು.

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ಹಿಂದೂ ಎಂದು ಹೇಳುವವರು ಒಂದು ದಿನ ಅವರ  ಅಪ್ಪನಿಗೆ ಪೂಜೆ ಮಾಡಲು ಬಿಡಲಿಲ್ಲ. ನಮ್ಮನ್ನು ಕುಗ್ಗಿಸಿದಷ್ಟು ನಾವು ಪುಟಿದೇಳುತ್ತೇವೆ. ಚೆಂಡನ್ನು ನೀವು ಎಷ್ಟೇ ಜೋರಾಗಿ ಎಸೆದರು ಅಷ್ಟೇ ಜೋರಾಗಿ ವಾಪಾಸ್ ಬರುತ್ತೆ. ನಾವು ರಾಜಕೀಯವಾಗಿ ಮತ್ತಷ್ಟು ಶಕ್ತಿಶಾಲಿಗಳಾಗುತ್ತೇವೆ ಎಂದು ಬಿಜೆಪಿ ವಿರುದ್ಧ ಗುಡುಗಿದರು.

ಬಿಜೆಪಿಯವರು ನಮ್ಮ ನಾಯಕರನ್ನು ರಾಜಕೀಯವಾಗಿ ಮುಗಿಸಬೇಕು ಅಂದು ಕೊಂಡಿದ್ದರೆ ಅದು ಅವರ ಕನಸು. ಅದು ಸಾಧ್ಯವಾಗದ ಮಾತು ಎಂದು ಇದೇ ವೇಳೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News