ಹಿಟ್ ಅಂಡ್ ರನ್: ಓರ್ವ ಮೃತ್ಯು, ಇಬ್ಬರಿಗೆ ಗಂಭೀರ ಗಾಯ
Update: 2019-09-06 23:31 IST
ಶಿವಮೊಗ್ಗ, ಸೆ. 6: ಕಾರೊಂದು ಢಿಕ್ಕಿ ಹೊಡೆದು ಪರಿಣಾಮ ಬೈಕ್‍ನಲ್ಲಿ ತೆರಳುತ್ತಿದ್ದ ಓರ್ವರು ಮೃತಪಟ್ಟು, ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗ ನಗರದ ಹೊರವಲಯ ಅಬ್ಬಲಗೆರೆ ಗ್ರಾಮದ ಸಮೀಪ ನಡೆದಿದೆ.
ಅಬ್ಬಲಗೆರೆಯ ಜನತಾ ಕಾಲೋನಿಯ ನಿವಾಸಿ ಮೋಹನ್ (24) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಸ್ನೇಹಿತರಾದ ಮಂಜುನಾಥ ಹಾಗೂ ಜೀವನ್ ಎಂಬುವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮೂವರು ಯುವಕರು ಸಮೀಪದ ಡಾಬಾಕ್ಕೆ ಊಟಕ್ಕೆಂದು ಬೈಕ್‍ನಲ್ಲಿ ತೆರಳುತ್ತಿದ್ದಾಗ, ಎದುರಿನಿಂದ ಆಗಮಿಸಿದ ಕಾರಿನ ಚಾಲಕ ಅತೀ ವೇಗ ಹಾಗೂ ಅಜಾಗರೂಕವಾಗಿ ಚಾಲನೆ ಮಾಡಿಕೊಂಡು ಬಂದು ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.