ಮೋದಿ ರಾಜ್ಯ ವಿರೋಧಿ ನೀತಿ ಮುಚ್ಚಲು ಆಗಲ್ಲ: ಜೆಡಿಎಸ್ ನಾಯಕ ರಮೇಶ್ ಬಾಬು
Update: 2019-09-07 21:53 IST
ಬೆಂಗಳೂರು, ಸೆ.7: ಪ್ರಧಾನಿ ಮೋದಿ ಚಂದ್ರಯಾನ ಯೋಜನೆಯಲ್ಲಿ ಇಸ್ರೋ ಪ್ರಯತ್ನಕ್ಕೆ ಅಭಿನಂದಿಸಿರುವುದು ಸ್ವಾಗತ. ಬಿಜೆಪಿಗೆ ರಾಜ್ಯದಲ್ಲಿ 25 ಸಂಸದ ಸ್ಥಾನ ನೀಡಿದ ಕನ್ನಡಿಗರು ಪ್ರವಾಹದಿಂದ ತತ್ತರಿಸಿರುವಾಗ ಒಂದು ಸಾಂತ್ವನವಾಗಲಿ, ಪರಿಹಾರದ ಹೇಳಿಕೆಯಾಗಲಿ ನೀಡದೆ ಇರುವುದು ಅವರ ಅಸಲೀತನಕ್ಕೆ ಸಾಕ್ಷಿ. ಮೋದಿ ರಾಜ್ಯ ವಿರೋಧಿ ನೀತಿಯನ್ನು ಬಾಗಿನ ಮೂಲಕ ಮುಚ್ಚಲು ಆಗಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಟ್ವೀಟ್ ಮಾಡಿದ್ದಾರೆ.