ಮಾಜಿ ಸಚಿವ ಡಿಕೆಶಿ ಬಂಧನ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ

Update: 2019-09-07 17:36 GMT

ಮೈಸೂರು,ಸೆ.7: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ದುರುದ್ದೇಶಪೂರ್ವಕವಾಗಿ, ರಾಜಕೀಯ ಕಾರಣದಿಂದ ಈಡಿ ವಶಕ್ಕೆ ಪಡೆದು ಅವರನ್ನು ಮಾನಸಿಕ, ದೈಹಿಕವಾಗಿ ಹಿಂಸಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ ಎಂದು ಆರೋಪಿಸಿ, ಮೈಸೂರಿನ ಡಿ.ಕೆ.ಶಿವಕುಮಾರ್ ಸ್ವಾಭಿಮಾನಿ ಬಳಗದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಅಗ್ರಹಾರ ವೃತ್ತದಲ್ಲಿ ಶನಿವಾರ ಜಮಾಯಿಸಿದ ಪ್ರತಿಭಟನಾಕಾರರು, ನಮ್ಮ ನಾಯಕ ಡಿ.ಕೆ ಶಿವಕುಮಾರ್ ಅವರನ್ನು ಈಡಿ ಬಿಡುಗಡೆ ಮಾಡುವವರೆಗೂ ನಾವು ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ. ರಾಜ್ಯದ ರಾಜಕಾರಣಿಗಳು ಯಾವ ಒಬ್ಬ ಪಕ್ಷದ ನಾಯಕನಿಗೆ ಆಗಿರುವ ಸಮಸ್ಯೆ ಅಂತ ನೋಡಬೇಡಿ. ನಾಳೆ ಇದು ಎಲ್ಲರಿಗೂ ಆಗುತ್ತದೆ. ಆದ್ದರಿಂದ ಪಕ್ಷಾತೀತವಾಗಿ ಈಡಿ ಅಧಿಕಾರಿಗಳ ನಡವಳಿಕೆಯನ್ನು ಗಟ್ಟಿಧನಿಯಲ್ಲಿ ಖಂಡಿಸಿ ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ರಾಜ್ಯ ಘಟಕದ ಮಹಿಳಾ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಮೇಯರ್ ಪುಷ್ಪಲತಾ ಜಗನ್ನಾಥ್, ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ಸದಸ್ಯರಾದ ಹೆಡತಲೆ ಮಂಜುನಾಥ್, ಎನ್.ಭಾಸ್ಕರ್, ಲೋಕೇಶ್ ರಾವ್, ಪ್ರಶಾಂತ ಗೌಡ, ಶ್ರೀನಾಥ್ ಬಾಬು, ಸುನಂದಕುಮಾರ್, ಪುಷ್ಪವಲ್ಲಿ, ವೆಂಕಟೇಶ್, ಗಿರೀಶ್.ಆರ್.ಸೇರಿದಂತೆ, ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News