ಚಂದಿರನಲ್ಲಿ ಮರೆಯಾದ ವಿಕ್ರಮ

Update: 2019-09-07 18:19 GMT

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ತನ್ನ ರೋಬಾಟಿಕ್ ಲ್ಯಾಂಡರ್‌ನ್ನು ಇಳಿಸಿದ ವಿಶ್ವದ ಪ್ರಪ್ರಥಮ ದೇಶವೆಂಬ ಹೆಗ್ಗಳಿಕೆ ಪಡೆಯಲು ಭಾರತವು ನಡೆಸಿದ ಪ್ರಯತ್ನ ವಿಫಲಗೊಂಡಿದೆ. ಶನಿವಾರ ಬೆಳಗಿನ ಜಾವ ಚಂದ್ರಯಾನ-2ರ ಲ್ಯಾಂಡರ್ ‘ವಿಕ್ರಮ’ ಕೊನೆಯ ಕ್ಷಣದಲ್ಲಿ ಭೂಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಳ್ಳುವುದರೊಂದಿಗೆ ಚಂದಿರನ ಮೇಲೆ ದಿಗ್ವಿಜಯದ ಕ್ಷಣಗಳನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಲು ಕಾತುರರಾಗಿದ್ದ ಕೋಟ್ಯಂತರ ಭಾರತೀಯರು ನಿರಾಶೆಯ ಮಡುವಿನಲ್ಲಿ ಮುಳುಗಿದರು. ಚಂದ್ರನ ಮೇಲ್ಮೈನಿಂದ 2.1 ಕಿ.ಮೀ.ಎತ್ತರದಲ್ಲಿ ಸುತ್ತುತ್ತಿದ್ದ ವಿಕ್ರಮ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್‌ಗೆ ಕೆಲವೇ ಕ್ಷಣಗಳಿರುವಾಗ ಇಸ್ರೋ ಅದರಿಂದ ಬರುತ್ತಿದ್ದ ಸಂಕೇತಗಳನ್ನು ಕಳೆದುಕೊಂಡಿತು. ಈ ಸಂದರ್ಭ ಗದ್ಗದಿತರಾದ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರನ್ನು ಪ್ರಧಾನಿ ಮೋದಿ ಆಲಂಗಿಸಿ ಸಂತೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor