ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಸಚಿವ ಸಿ.ಟಿ.ರವಿ

Update: 2019-09-10 18:12 GMT

ಮೈಸೂರು,ಸೆ.10: ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನಿಗಿಂತ ದೊಡ್ಡವರೆಂದು ಕೊಂಡರೆ ಅದು ಸಂವಿಧಾನಕ್ಕೆ ಬಗೆದ ಅಪರಾಧ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಯಾರು ಎಮೋಷನಲ್ ಆಗಿ ತೆಗೆಯಬಾರದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

ಅರಮೆನ ಆವರಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ  ಡಿಕೆಶಿ ಪರ ಒಕ್ಕಲಿಗ ಸಂಘಟನೆ ಪ್ರತಿಭಟನೆ ವಿಚಾರಕ್ಕೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ನಾನು ಒಕ್ಕಲಿಗ ಸಮುದಾಯಕ್ಕೆ ಸೇರಿದವನು. ನಾನು ನಾರ್ಮಲ್ ಇದ್ದವನು. ಅಬ್ ನಾರ್ಮಲ್ ಆಗಿದ್ದರೆ ಎಲ್ಲರಿಗೂ ಡೌಟ್ ಬರುತ್ತೆ. ನನ್ನ ಮನೆಯಲ್ಲಿ ಹತ್ತು ಕೋಟಿ ಹಣವಿದ್ದರೆ ನಾನು ಪ್ರಾಮಾಣಿಕ ಅಂತ ಅನ್ನಿಸಿಕೊಳ್ಳಲು ಸಾಧ್ಯವಿಲ್ಲ. ನನ್ನ ಮನೆಯಲ್ಲಿ ಎಂಟು ಕೋಟಿ ಹಣವಿದೆ ಎಂದರೆ ಅದಕ್ಕೆ ಲೆಕ್ಕ ಕೊಡಬೇಕಲ್ಲ. ಇದನ್ನೇ ತನಿಖೆ ಮಾಡುತ್ತಿದ್ದಾರೆ. ತನಿಖೆಯನ್ನೇ ಪ್ರಶ್ನೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಆದರೆ ಸಂವಿಧಾನದಡಿ ತನಿಖೆ ನಡೆಸೋದೆ ತಪ್ಪಾ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News