ಅನರ್ಹ ಶಾಸಕರ ಅರ್ಜಿ ವಿಚಾರಣೆ ಸೆ.16ಕ್ಕೆ ಮುಂದೂಡಿಕೆ

Update: 2019-09-11 14:11 GMT

ಬೆಂಗಳೂರು, ಸೆ.11: ಸ್ಪೀಕರ್ ತೀರ್ಮಾನ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೆ.16ರಂದು ನಡೆಯುವ ಸಾಧ್ಯತೆಗಳು ಹೆಚ್ಚಿವೆ.

ರಮೇಶ್ ಜಾರಕಿಹೊಳಿ ಸೇರಿ 17ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಹಾಲ್ ನಂಬರ್ 3ರಲ್ಲಿ ಸೆ.11ಕ್ಕೆ ವಿಚಾರಣೆಗೆ ನಿಗದಿಪಡಿಸಲಾಗಿತ್ತು. ಆದರೆ, ದಿಢೀರನೇ ರಮೇಶ್ ಜಾರಕಿಹೊಳಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಕಲಾಪ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ, ಅರ್ಜಿ ವಿಚಾರಣೆ ಸೆ.16ರಂದು ನಡೆಯುವ ಸಾಧ್ಯತೆಗಳು ಹೆಚ್ಚಿವೆ.

ಈಗಾಗಲೇ ಶಾಸಕರು ಅನರ್ಹಗೊಂಡು ಒಂದೂವರೆ ತಿಂಗಳು ಕಳೆದಿದ್ದು, ಇತ್ತ ಅರ್ಜಿ ವಿಚಾರಣೆಯೂ ವಿಳಂಬವಾಗುತ್ತಿರುವುದರಿಂದ ಅನರ್ಹ ಶಾಸಕರು ತೀವ್ರ ತಳಮಳಕ್ಕೊಳಗಾಗಿದ್ದಾರೆ. ಹೀಗಾಗಿ, ಸೆ.16ರಂದು ವಿಚಾರಣೆಯಲ್ಲಿ ಯಾವ ತೀರ್ಪು ಹೊರಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News