ನಾಳೆ ಡಿ.ಕೆ.ಶಿವಕುಮಾರ್‌ ಜಾಮೀನು ಅರ್ಜಿ ವಿಚಾರಣೆ

Update: 2019-09-12 14:47 GMT

ಹೊಸದಿಲ್ಲಿ, ಸೆ.12: ಈಡಿ ವಶದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ರ ಜಾಮೀನು ಅರ್ಜಿ ವಿಚಾರಣೆ ನಾಳೆ(ಸೆ.13) ಹೊಸದಿಲ್ಲಿಯ ಪಿಎಂಎಲ್ಎ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ. 

ಸದ್ಯ ಈಡಿ ವಶದಲ್ಲಿರುವ ಡಿಕೆಶಿಯನ್ನು ಈಡಿ ಅಧಿಕಾರಿಗಳು ಶುಕ್ರವಾರ ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ. ಡಿಕೆಶಿಯ ಈಡಿ ಕಸ್ಟಡಿ ಶುಕ್ರವಾರ ಅಂತ್ಯವಾಗುವ ಹಿನ್ನೆಲೆ ಮಧ್ಯಾಹ್ನದ ವೇಳೆಗೆ ವಿಶೇಷ ನ್ಯಾಯಾಲಯ ಡಿಕೆಶಿಯನ್ನು ಕರೆತರುವ ಸಾಧ್ಯತೆ ಇದೆ. ಇನ್ನು ಈಗಾಗಲೇ ಡಿಕೆಶಿ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಲಿದ್ದು, ನಾಳೆಯೇ ಅರ್ಜಿಯ ವಿಚಾರಣೆ ನಡೆಯಲಿದೆ.

ನಾಳೆ ಏನಾಗಬಹುದು: ಶುಕ್ರವಾರ ನ್ಯಾಯಾಲಯದಲ್ಲಿ ಡಿಕೆಶಿಯ ಕಸ್ಟಡಿಯನ್ನು ಮತ್ತೆ ಕೆಲ ದಿನಗಳ ಕಾಲ ಮುಂದುವರೆಸಲು ಈಡಿ ಮನವಿ ಮಾಡಲು ಪ್ಲಾನ್ ಮಾಡಿದೆ ಎನ್ನಲಾಗಿದ್ದು, ನ್ಯಾಯಾಲಯ ಈಡಿ ಮನವಿ ಪುರಸ್ಕರಿಸಿ ಕಸ್ಟಡಿಗೆ ನೀಡಬಹುದು. ಇತ್ತ ಡಿಕೆಶಿ ಪರ ವಕೀಲರು ನಾಳೆ ಜಾಮೀನಿಗಾಗಿ ಪ್ರಬಲ ವಾದ ಮಾಡಲು ತಯಾರಿ ನಡೆಸಿಕೊಂಡಿದ್ದು, ವಾದ ಆಲಿಸುವ ನ್ಯಾಯಾಲಯ ಜಾಮೀನು ನೀಡುವ ಸಾದ್ಯತೆಯೂ ಇದೆ. ಆದರೆ ಪಾಸ್‌ಪೋರ್ಟ್ ಜಪ್ತಿ ಮಾಡಿ, ವಿದೇಶಕ್ಕೆ ಹೋಗದಂತೆ ನಿರ್ಬಂದಿಸಿ, ಸಾಕ್ಷಿ ನಾಶ ಮಾಡದಂತೆ ಷರತ್ತು ಹಾಕಿ ಜಾಮೀನು ನೀಡುವ ಸಾಧ್ಯತೆಯೂ ಇದೆ. ಅಥವಾ, ಈಡಿ ಕಸ್ಟಡಿ ಮುಂದುವರೆಸದೆ, ಜಾಮೀನು ನೀಡದೆ ನ್ಯಾಯಾಂಗ ಬಂಧನಕ್ಕೆ ಆದೇಶಿಸುವ ಅವಕಾಶಗಳೂ ಇವೆ. ಒಂದು ವೇಳೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರೆ, ಮಾಜಿ ಕೇಂದ್ರ ಸಚಿವ ಚಿದಂಬರಂ ಇರುವ ತಿಹಾರ್ ಜೈಲು ಸೇರುವ ಸಾಧ್ಯತೆಯೂ ಇದೆ. ಇನ್ನು ಈ ವೇಳೆ ಪ್ರಬಲ ವಾದ ಮಂಡಿಸಲು ಡಿಕೆಶಿ ಪರ ವಕೀಲರು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಈಡಿ ಅಧಿಕಾರಿಗಳು ಡಿಕೆಶಿ ಪರ ವಕೀಲರ ಜಾಮೀನು ಅರ್ಜಿಗೆ ಅಕ್ಷೇಪಣೆ ಸಲ್ಲಿಸಲು ಪ್ಲಾನ್ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News