ಅಕ್ರಮ ಗಣಿಗಾರಿಕೆ ಪ್ರಕರಣ: ಶಾಸಕ ನಾಗೇಂದ್ರ, ಆನಂದ್‌ ಸಿಂಗ್ ಆರೋಪ ಮುಕ್ತ

Update: 2019-09-13 16:46 GMT

ಬೆಂಗಳೂರು, ಸೆ.13: ಅಕ್ರಮ ಗಣಿಗಾರಿಕೆ ಪ್ರಕರಣವೊಂದರಲ್ಲಿ ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಹಾಗೂ ಅನರ್ಹ ಶಾಸಕ ಆನಂದ್‌ ಸಿಂಗ್ ಆರೋಪ ಮುಕ್ತರಾಗಿದ್ದಾರೆ.

ಪ್ರಕರಣ ಖುಲಾಸೆಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಇದರಿಂದ, ನಾಗೇಂದ್ರ ಹಾಗೂ ಆನಂದ್‌ಸಿಂಗ್‌ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

2009-10ರ ಸಾಲಿನಲ್ಲಿ ಪರವಾನಿಗೆ ಪಡೆಯದೇ ಅಕ್ರಮ ಗಣಿಗಾರಿಕೆ ಮಾಡಿ ಸುಮಾರು 50 ಸಾವಿರ ಮೆಟ್ರಿಕ್ ಟನ್‌ನಷ್ಟು ಅಧಿರನ್ನು ಬೇಲಿಕೆರೆ ಬಂದರ್‌ನ ಮುಖಾಂತರ ರಫ್ತು ಮಾಡಿದ್ದಾರೆ. ಇದರಿಂದ, ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂ.ನಷ್ಟ ಮಾಡಿರುವ ಆರೋಪ ಇಬ್ಬರು ಶಾಸಕರ ಮೇಲೆ ಇತ್ತು. ಆದರೆ, ಸಾಕ್ಷಾಧಾರ ಕೊರತೆಯಿಂದ ಪ್ರಕರಣ ಖುಲಾಸೆಗೊಳಿಸಿ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ್ ಆದೇಶಿಸಿದ್ದಾರೆ. ಇದೇ ಪ್ರಕರಣದಲ್ಲಿ ವಾರೆಂಟ್ ಜಾರಿ ಮಾಡಿದ್ದರೂ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ವಿಚಾರಣೆಗೆ ಗೈರಾಗಿದ್ದನ್ನು ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News