ರಂಗಾಯಣದ ನಾಲ್ವರು ನಿರ್ದೇಶಕರನ್ನು ವಜಾಗೊಳಿಸಿ ಆದೇಶ

Update: 2019-09-13 16:48 GMT

ಬೆಂಗಳೂರು, ಸೆ.13: ರಾಜ್ಯ ಸರಕಾರ ರಂಗಾಯಣದ ನಾಲ್ಕು ಸಂಸ್ಥೆಗಳ ನಿರ್ದೇಶಕರನ್ನು ವಜಾಗೊಳಿಸಿ ಆದೇಶಿಸಿದೆ. ಮೈಸೂರು ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ಶಿವಮೊಗ್ಗ ರಂಗಾಯಣ ನಿರ್ದೇಶಕ ಡಾ.ಎಂ.ಗಣೇಶ್, ಕಲಬುರ್ಗಿ ರಂಗಾಯಣದ ನಿರ್ದೇಶಕ ವಿ.ಮಹೇಶ್ ಹಾಗೂ ಧಾರವಾಡದ ರಂಗಾಯಣದ ನಿರ್ದೇಶಕ ಶಿಗ್ಗಾಂ ಪ್ರಮೋದ್ರರನ್ನು ವಜಾಗೊಳಿಸಲಾಗಿದೆ.

ಈ ನಿರ್ದೇಶಕರನ್ನು ಸಮ್ಮಿಶ್ರ ಸರಕಾರ ಜು.14ರಂದು ನೇಮಿಸಿ ಆದೇಶ ಹೊರಡಿಸಿತ್ತು. ಹೊಸ ನಿರ್ದೇಶಕರನ್ನು ನೇಮಿಸುವವರೆಗೆ ಸದ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯವರನ್ನೇ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

2018 ಅ.18ರಂದು ರಂಗಸಮಾಜದ ಸಾರ್ವತ್ರಿಕ ಮಂಡಳಿಗೆ 7 ಮಂದಿಯನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು. ಉತ್ತರ ಕನ್ನಡದ ಶ್ರೀಪಾದ ಭಟ್, ಉಡುಪಿಯ ಗೋಪಾಲಕೃಷ್ಣ ನಾಯರಿ, ದಾವಣಗೆರೆಯ ಮಲ್ಲಿಕಾರ್ಜುನ ಕಡಕೋಳ, ಬೆಳಗಾವಿಯ ವಿಶ್ವೇಶ್ವರಿ ಹಿರೇಮಠ, ಬಳ್ಳಾರಿಯ ಸಹನಾ ಪಿಂಜಾರ್, ಬೆಂಗಳೂರಿನ ಎಲ್.ಕೃಷ್ಣಪ್ಪ ಹಾಗೂ ಮೈಸೂರಿನ ಎಂ.ಚಂದ್ರಕಾಂತ್‌ರನ್ನು ಅಧಿಕಾರೇತರ ಸ್ಥಾನದಿಂದ ವಜಾಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News