ರಂಗಾಯಣದ ನಿರ್ದೇಶಕರ ವಜಾಕ್ಕೆ ಖಂಡನೆ

Update: 2019-09-14 16:45 GMT

ಬೆಂಗಳೂರು, ಸೆ. 14: ರಂಗಾಯಣದ ನಿರ್ದೇಶಕರುಗಳನ್ನು ತೆಗೆದು ಹಾಕುವ ಮತ್ತು ರಂಗ ಸಮಾಜವನ್ನು ವಜಾ ಮಾಡುವ ರಾಜ್ಯ ಸರಕಾರದ ನಿರ್ಧಾರವನ್ನು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯು ಖಂಡಿಸಿದೆ.

ಅವಧಿ ಮುಗಿಯುವ ಮೊದಲೇ ರಂಗಾಯಣದ ನಿರ್ದೇಶಕರನ್ನು ತೆಗೆದುಹಾಕಿರುವ ಸರಕಾರದ ನಡೆ ಅಪ್ರಜಾತಾಂತ್ರಿಕವಾಗಿದೆ. ಕಲೆ ಸಮಾಜದ ಆಸ್ತಿ, ಉತ್ತಮ ಕಲೆ-ಸಾಹಿತ್ಯವನ್ನು ಪ್ರೋತ್ಸಾಹಿಸುವುದು ಎಲ್ಲಾ ಜನಪರ ಸರಕಾರಗಳ ಆದ್ಯ ಕರ್ತವ್ಯ. ಸರಕಾರದ ಈ ನಿರ್ಧಾರವನ್ನು ಎಲ್ಲಾ ಕಲಾಪ್ರೇಮಿ ಜನತೆ ಸಾಹಿತ್ಯಾಸಕ್ತರು ಒಟ್ಟಾಗಿ ಧ್ವನಿಯೆತ್ತಿ ವಿರೋಧಿಸಬೇಕಾಗಿದೆ.

ಸರಕಾರ ತನ್ನ ಈ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಡಾ.ಎಸ್.ಕೆ.ಶೆಟ್ಟಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News