ಹಿಂದಿ ಹೇರಿಕೆ ಒಪ್ಪಲು ಸಾಧ್ಯವಿಲ್ಲ: ಎಸ್‌ಡಿಪಿಐ

Update: 2019-09-15 14:53 GMT

ಬೆಂಗಳೂರು, ಸೆ.15: ಹಿಂದಿ ಭಾಷೆಯನ್ನು ದೇಶದ ಸರ್ವಜನರ ಭಾಷೆಯನ್ನಾಗಿ ಹೇರುವ ಹಾಗೂ ದೇಶದಾದ್ಯಂತ ‘ಹಿಂದಿ ದಿವಸ’ವನ್ನು ಹೇರುವ ಬಿಜೆಪಿ ಸರಕಾರದ ಧೋರಣೆ ದಾರ್ಷ್ಟದಿಂದ ಕೂಡಿದ್ದು, ಇದು ದೇಶದ ಅಖಂಡತೆಗೆ ನೀಡಿದ ದೊಡ್ಡ ಬೆದರಿಕೆಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತಿಳಿಸಿದೆ.

ದೇಶದಲ್ಲಿ 22 ಭಾಷೆಗಳಿದ್ದು, ಅದರಲ್ಲಿ ಹಿಂದಿಯೂ ಒಂದಾಗಿರುತ್ತದೆ. ಇದೇ ರೀತಿ ಕನ್ನಡ, ತಮಿಳು, ಮಲಯಾಳಂ, ಬೆಂಗಾಳಿ ಮುಂತಾದ ಭಾಷೆಗಳನ್ನು ದೇಶದ ಹೆಚ್ಚಿನ ಜನರು ಆಡುತ್ತಿದ್ದು, ಎಲ್ಲ ಭಾಷೆಗಳು ಸಮಾನ ಸ್ಥಾನಮಾನವನ್ನು ಹೊಂದಿದ್ದು ಯಾವುದೇ ಒಂದು ಭಾಷೆಯನ್ನು ಇನ್ನೊಬ್ಬರ ಮೇಲೆ ಹೇರುವಂತಿಲ್ಲ.

ದೇಶದಾದ್ಯಂತ ಹಿಂದಿ ದಿವಸವನ್ನು ಹೇರುತ್ತಿರುವುದು ಮತ್ತು ಸರಕಾರಿ ದಾಖ ಲೆಗಳಲ್ಲಿ ಹಿಂದಿ ಕಡ್ಡಾಯ ಮಾಡುವುದು ಇತರ ಅಧಿಕೃತ ಭಾಷೆಗಳನ್ನು ಮುಗಿಸುವ ಹುನ್ನಾರ ಅಡಗಿದೆ. ಇದನ್ನು ಕನ್ನಡಿಗರು ಎಂದೂ ಸಹಿಸುವುದಿಲ್ಲ. ಒಂದು ವೇಳೆ ಕೇಂದ್ರ ಸರಕಾರವು ಇದೇ ರೀತಿ ತನ್ನ ಧೋರಣೆಯಲ್ಲಿ ನಿಲ್ಲುವುದಾದರೆ ಕನ್ನಡ ಭಾಷಿಗರು ಭಾರೀ ಹೋರಾಟ ನಡೆಸುತ್ತೇವೆ ಎಂದು ಎಸ್‌ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News