‘ಬಿಜೆಪಿಗೆ ಮತ ನೀಡಿದ್ದಕ್ಕೆ ನಾಚಿಕೆಯಾಗುತ್ತಿದೆ’: ಅಮಿತ್ ಶಾ ವಿಡಿಯೋ ಪೋಸ್ಟ್ ಮಾಡಿದ ಪ್ರತಾಪ್ ಸಿಂಹಗೆ ಜನರ ಮಂಗಳಾರತಿ

Update: 2019-09-15 15:46 GMT

ಬೆಂಗಳೂರು, ಸೆ.15: ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ಇತರ ನಾಯಕರು ನೆಲವೊಂದನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿ, ಛೀಮಾರಿ ಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಏಮ್ಸ್ ಆಸ್ಪತ್ರೆಯ ನೆಲವನ್ನು ಅಮಿತ್ ಶಾ, ಜೆಪಿ ನಡ್ಡಾ ಮೊದಲಾದವರು ಸ್ವಚ್ಛಗೊಳಿಸುತ್ತಿರುವ ವಿಡಿಯೋವನ್ನು ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದರು. ಆದರೆ ನೆಲ ಅದಾಗಲೇ ಸ್ವಚ್ಛವಾಗಿದ್ದು, ಇದು ಬರಿಯ ನಾಟಕ ಎಂದು ಜನರು ವಿಡಿಯೋಗೆ ಕಮೆಂಟ್ ಮಾಡತೊಡಗಿದರು.

ಇದರಲ್ಲಿ ಹೆಚ್ಚಿನವರು ‘ನಾವು ಬಿಜೆಪಿ ಬೆಂಬಲಿಗರು. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದ್ದೇವೆ. ಆದರೆ ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಅಪಾರ ಹಾನಿ ಸಂಭವಿಸಿದರೂ ಯಾವುದೇ ಪರಿಹಾರ ನೀಡಿಲ್ಲ. ಆದ್ದರಿಂದ ಬಿಜೆಪಿ ಬೆಂಬಲಿಗ ಎನ್ನಲು ನಾಚಿಕೆಯಾಗುತ್ತಿದೆ” ಎಂದು ಕಮೆಂಟ್ ಮಾಡಿದ್ದಾರೆ. ‘ಬರೀ ನಾಟಕ ಆಯಿತು’, ‘ಇದು ಫೊಟೊಶೂಟ್’, ‘ಇದೇ ಸ್ವಚ್ಛತೆಯನ್ನು ಪ್ರವಾಹಪೀಡಿತ ಪ್ರದೇಶಗಳಲ್ಲಿ ಮಾಡಿ;, ‘ನಾನು ಬಿಜೆಪಿ ಬೆಂಬಲಿಗ. ಆದರೆ ಇದು ಕಾಮಿಡಿಯಂತೆ ಕಾಣುತ್ತಿದೆ’, ‘ಈಗ ಇವರಿಬ್ಬರ ಕಾಮೆಡಿ ಬೇಕಾ ಸ್ವಾಮಿ?’, ‘ಮೊದಲು ನಮ್ಮ ಮೇಲೆ ಹಿಂದಿ ಹೇರಬೇಡಿ ಎಂದು ಅವರಿಗೆ ಹೇಳಿ. ಕನ್ನಡಿಗರ ಬೆನ್ನಿಗೆ ಚೂರಿ ಹಾಕುವಾಗ ನಿರುಪಯುಕ್ತ ಸಂಸದರು ಬಾಯಿ ತೆರೆಯುತ್ತಿಲ್ಲ’, ‘ಇದು ಅತೀ ಮೂರ್ಖತನದ ಕೆಲಸ’, ‘ಬರಿ ನಾಟಕ ಮಾಡ್ಕೊಂಡು... ಜನನ ಯಾಮಾರಿಸ್ತಾ ಇದ್ದೀರ’, ‘ತೂ . ಈ ಥರ ನಾಟಕಗಳು ಹಾಡಿ ಹಾಡಿ ಇಡೀ ದೇಶದ ಜನರನ್ನು ಮೋಸ ಮಾಡುತ್ತಿದ್ದಾರೆ ನಾಚಿಕೆ ಮಾನ ಮರ್ಯಾದೆ ಏನು ಇಲ್ಲಾ ನಿಮಗೆ’ ಎಂದು ಫೇಸ್ಬುಕ್ ಬಳಕೆದಾರರು ಸಂಸದರಿಗೆ ಛೀಮಾರಿ ಹಾಕಿದ್ದಾರೆ.

ಇವುಗಳಲ್ಲಿ ಕೆಲ ಕಾಮೆಂಟ್ ಗಳು ಈ ಕೆಳಗಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News