ವಿವಾದಾತ್ಮಕ 'ಹಿಜಡಾ' ಹೇಳಿಕೆ: ಸಚಿವ ಕೆ.ಎಸ್.ಈಶ್ವರಪ್ಪ ಕ್ಷಮೆಯಾಚಿಸಲು ಆಗ್ರಹ
Update: 2019-09-15 21:59 IST
ಬೆಂಗಳೂರು, ಸೆ.15: ಹಿಜಡಾ ಕುರಿತ ಹೇಳಿಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಈ ಕೂಡಲೇ ಕ್ಷಮೆಯಾಚಿಸುವಂತೆ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಆಗ್ರಹಿಸಿದ್ದಾರೆ.
ಕೆ.ಎಸ್.ಈಶ್ವರಪ್ಪ ಅವರ ವಿವಾದಿತ ಹೇಳಿಕೆ ಕುರಿತು 'ವಾರ್ತಾಭಾರತಿ' ಸುದ್ದಿ ಜಾಲತಾಣ ಪ್ರಕಟಿಸಿದ್ದ ವರದಿಯನ್ನು ಉಲ್ಲೇಖಿಸಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದಿರುವ ಅವರು, ಈಶ್ವರಪ್ಪ ಅವರ ಹೇಳಿಕೆ ಖಂಡನೀಯ. ಸಚಿವ ಮಾತುಗಳು ನಮ್ಮ ಸಮುದಾಯವನ್ನು ಬೆದರಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರ ಮತಗಳನ್ನು ಪಡೆದು ಗೆಲುವು ಸಾಧಿಸುವ ಶಾಸಕರಲ್ಲಿ ಹಿಜಡಾತನ ಅಡಗಿದೆ ಎಂದು ಹೇಳಿರುವುದು ಸರಿಯಲ್ಲ. ಅಲ್ಲದೆ, ಈ ಹೇಳಿಕೆಯನ್ನು ವಾಪಸ್ಸು ಪಡೆದು, ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.