ಅಸ್ತ್ರ – ಕ್ಷಿಪಣಿ ಯಶಸ್ವಿ ಪರೀಕ್ಷೆ

Update: 2019-09-17 18:20 GMT
ಭಾರತೀಯ ವಾಯುಪಡೆ ಗಾಳಿಯಲ್ಲಿ ಗುರಿಯನ್ನು ಭೇದಿಸಬಲ್ಲ ಅಸ್ತ್ರ ಕ್ಷಿಪಣಿಯನ್ನು ಒಡಿಶಾ ಕರಾವಳಿಯಲ್ಲಿ ಮಂಗಳವಾರ ಯಶಸ್ವಿ ಪ್ರಯೋಗ ನಡೆಸಿತು. ಗಾಳಿಯಲ್ಲಿ ಗುರಿಯನ್ನು ಭೇದಿಸಬಲ್ಲ ಮೊದಲ ದೇಶೀಯ ಕ್ಷಿಪಣಿಯ ಸಾಮರ್ಥ್ಯವನ್ನು ನಿಖರವಾಗಿ ಅಳೆಯಲು ಚಲಿಸುವ ಗುರಿಯನ್ನು ಹಾರಿಸಲಾಗಿತ್ತು ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. ಸುಖೋಯಿ 30 ಎಂಕೆಐ ಯುದ್ಧವಿಮಾನದ ಮೂಲಕ ಹಾರಿಸಲ್ಟಟ್ಟ ಕ್ಷಿಪಣಿ ಗುರಿಯನ್ನು ಭೇದಿಸುವುದನ್ನು ಖಚಿತಪಡಿಸಿಕೊಳ್ಳಲು ವಿವಿಧ ರಾಡರ್‌ಗಳು, ಎಲೆಕ್ಟ್ರೋ-ಆಪ್ಟಿಕಲ್ ಟ್ರಾಕಿಂಗ್ ವ್ಯವಸ್ಥೆ ಮತ್ತು ಸೆನ್ಸರ್‌ಗಳನ್ನು ಬಳಸಲಾಗಿತ್ತು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ. ಕ್ಷಿಪಣಿಯ ಯಶಸ್ವಿ ಪ್ರಯೋಗ ನಡೆಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಭಾಶಯ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor