ಮೈಸೂರು ದಸರಾ ಉತ್ಸವ: ಕೆಎಸ್ಸಾರ್ಟಿಸಿಯಿಂದ ವಿಶೇಷ ಪ್ಯಾಕೇಜ್

Update: 2019-09-18 15:33 GMT

ಬೆಂಗಳೂರು, ಸೆ. 18: ಮೈಸೂರು ದಸರಾ ಉತ್ಸವದ ಅಂಗವಾಗಿ ಪ್ರವಾಸಿಗರ ಹಾಗೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ವಿಶೇಷ ಪ್ಯಾಕೇಜ್ ಟೂರ್ ಸೌಲಭ್ಯ ಕಲ್ಪಿಸಿದೆ.

ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿಬೆಟ್ಟ (ಪ್ರಯಾಣ ದರ ವಯಸ್ಕರಿಗೆ: 350 ರೂ., ಮಕ್ಕಳಿಗೆ 175 ರೂ.)ಕ್ಕೆ ವಿಶೇಷ ಪ್ಯಾಕೇಟ್ ವ್ಯವಸ್ಥೆ ಒದಗಿಸಿದೆ.

ಜಲದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ ನಿಸರ್ಗಧಾಮ, ರಾಜಸೀಟ್, ಹಾರಂಗಿ ಜಲಾಶಯ ಮತ್ತು ಕೆಆರ್‌ಎಸ್ (ಪ್ರಯಾಣ ದರ ವಯಸ್ಕರಿಗೆ: 375 ರೂ.ಮತ್ತು ಮಕ್ಕಳಿಗೆ: 190 ರೂ.).

ದೇವದರ್ಶಿನಿ: ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ಪ್ರಯಾಣ ದರ ವಯಸ್ಕರಿಗೆ: 275 ರೂ.ಮತ್ತು ಮಕ್ಕಳಿಗೆ: 140 ರೂ.)

ಐರಾವತ ಕ್ಲಬ್ ಕ್ಲಾಸ್:

ಮಡಿಕೇರಿ ಪ್ಯಾಕೇಜ್: ನಿಸರ್ಗಧಾಮ-ಗೋಲ್ಡನ್ ಟೆಂಪಲ್-ಹಾರಂಗಿ ಜಲಾಶಯ-ರಾಜಾ ಸೀಟ್-ಅಬ್ಬಿಫಾಲ್ಸ್ (ಪ್ರಯಾಣ ದರ ವಯಸ್ಕರಿಗೆ: 1,200 ರೂ. ಮತ್ತು ಮಕ್ಕಳಿಗೆ: 900 ರೂ.). ಬಂಡೀಪುರ ಪ್ಯಾಕೇಜ್: ಸೋಮನಾಥಪುರ-ತಲಕಾಡು-ಗೋಪಾಲಸ್ವಾಮಿ ಬೆಟ್ಟ-ಬಂಡೀಪುರ-ನಂಜನಗೂಡು (ಪ್ರಯಾಣ ದರ ವಯಸ್ಕರಿಗೆ: 1 ಸಾವಿರ ರೂ. ಮತ್ತು ಮಕ್ಕಳಿಗೆ: 750 ರೂ.)

ಶಿಂಷಾ ಪ್ಯಾಕೇಜ್: ಶಿವನಸಮುದ್ರ- ಶ್ರೀರಂಗಪಟ್ಟಣ- ರಂಗನತಿಟ್ಟು- ಬಲಮುರಿ ಫಾಲ್ಸ್-ಕೆಆರ್‌ಎಸ್ (ಪ್ರಯಾಣ ದರ ವಯಸ್ಕರಿಗೆ: 800 ರೂ. ಮತ್ತು ಮಕ್ಕಳಿಗೆ: 600 ರೂ.)

ಊಟಿ ಪ್ಯಾಕೇಜ್: ಊಟಿ-ಬಟಾನಿಕಲ್ ಗಾರ್ಡನ್- ಇಟಾಲಿಯನ್ ರೋಸ್ ಗಾರ್ಡನ್-ಬೋಟ್ ಹೌಸ್ (ಪ್ರಯಾಣ ದರ ವಯಸ್ಕರಿಗೆ: 1,600 ರೂ.ಮತ್ತು ಮಕ್ಕಳಿಗೆ: 1,200 ರೂ.).

ಮೇಲ್ಕಂಡ ಸಾರಿಗೆಗಳು ಬೆಳಗ್ಗೆ ಮೈಸೂರಿನಿಂದ ಹೊರಟು ಮೇಲ್ಕಂಡ ವಿವಿಧ ಸ್ಥಳಗಳನ್ನು ಸಂದರ್ಶಿಸಿದ ನಂತರ ಸಾಯಂಕಾಲ ಮೈಸೂರಿಗೆ ವಾಪಸ್ಸಾಗುತ್ತವೆ. ಈ ಪ್ಯಾಕೇಜ್ ಸೆ.29ರಿಂದ ಅಕ್ಟೋಬರ್ 13ರ ಅವಧಿ ಕಾರ್ಯಾಚರಿಸಲಾಗುವುದು. ಸದರಿ ಪ್ಯಾಕೇಜ್ ಟೂರ್‌ಗಳ ಟಿಕೇಟ್‌ಗಳನ್ನು (ksrtc.in) ನಲ್ಲಿ ಅಂರ್ತಜಾಲದ ಮೂಲಕ ಮುಂಗಡ ಕಾಯ್ದಿರಿಸಲು ಹಾಗೂ ನಿಗಮದ ಮುಂಗಡ ಟಿಕೇಟ್ ಕೌಂಟರ್‌ಗಳ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News