ಸೆ.26-27ಕ್ಕೆ ಬ್ಯಾಂಕ್ ನೌಕರರ ಮುಷ್ಕರ: ಬ್ಯಾಂಕಿಂಗ್ ಸೇವೆಯಲ್ಲಿ ಸತತ ಐದು ದಿನ ವ್ಯತ್ಯಯ

Update: 2019-09-19 12:36 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ. 19: ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಿಲೀನಕ್ಕೆ ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಬ್ಯಾಂಕ್ ನೌಕರರ ಒಕ್ಕೂಟ ಸೆ.26ರಿಂದ 2 ದಿನ ಮುಷ್ಕರಕ್ಕೆ ಕರೆ ನೀಡಿದ್ದು, ನಾಲ್ಕನೆ ಶನಿವಾರ(ಸೆ.28) ಮತ್ತು ರವಿವಾರ(ಸೆ.29) ರಜೆ ಹಿನ್ನೆಲೆಯಲ್ಲಿ ಸತತ ನಾಲ್ಕು ದಿನಗಳ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ.

ಹೀಗಾಗಿ ಸಾರ್ವಜನಿಕ ಗ್ರಾಹಕರು ತಮಗೆ ಅಗತ್ಯದ ಬ್ಯಾಂಕ್ ವ್ಯವಹಾರ ಮತ್ತು ಬೇಕಿರುವಷ್ಟು ಹಣವನ್ನು ಮೊದಲೇ ಡ್ರಾ ಮಾಡಿಕೊಳ್ಳುವುದು ಒಳ್ಳೆಯದು. ಎರಡು ದಿನ ಮುಷ್ಕರದ ಹಿನ್ನೆಲೆಯಲ್ಲಿ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ.

ನಾಲ್ಕನೇ ಶನಿವಾರ ಮತ್ತು ರವಿವಾರವೂ ರಜೆ ಇರಲಿದೆ. ಸೆ.30ರಂದು ಬ್ಯಾಂಕ್‌ಗಳ ಅರ್ಧವಾರ್ಷಿಕ ಲೆಕ್ಕವನ್ನು ಚುಕ್ತಾಗೊಳಿಸಬೇಕಿರುತ್ತದೆ. ಹೀಗಾಗಿ ಅಂದು ಬ್ಯಾಂಕ್ ತೆರೆದಿದ್ದರೂ ಗ್ರಾಹಕರಿಗೆ ಸೇವೆ ದೊರೆಯುವ ಸಾಧ್ಯತೆಗಳಿಲ್ಲ. ಆದುದರಿಂದ ಒಟ್ಟಾರೆ ಸತತ 5 ದಿನ ಬ್ಯಾಂಕ್‌ಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಮುಷ್ಕರ, ರಜೆ ಹಿನ್ನೆಲೆಯಲ್ಲಿ ಬ್ಯಾಂಕುಗಳ ಎಟಿಎಂಗಳಲ್ಲಿಯೂ ಗ್ರಾಹಕರಿಗೆ ಅಗತ್ಯದಷ್ಟು ಹಣದ ಸಿಗುವುದು ಕಷ್ಟವಾಗಲಿದೆ. ಆದುದರಿಂದ ಸಾರ್ವಜನಿಕರು ತಮಗೆ ಬೇಕಿರುವಷ್ಟು ಹಣವನ್ನು ಸೆ.26ಕ್ಕೂ ಮೊದಲೇ ಡ್ರಾ ಮಾಡಿಕೊಳ್ಳುವುದು ಒಳ್ಳೆಯದು ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News